ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈನ ಸಂಭ್ರಮದ ವಾರ್ಷಿಕೋತ್ಸವ ಆಚರಣೆ ಮತ್ತು ಉದ್ಯಮಿ ನಾಗರಜ.ಡಿ ಪಡುಕೋಣೆ ಇವರಿಗೆ ಕದಂ ದೇವಾಡಿಗ ಸಾಧಕ ಪ್ರಶಸ್ತಿ

0
307

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈನ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ದುಬೈನ ಹ್ಯಾಬಿಟೆಟ್ ಸೂಲ್ಕ್ ಅಜ್ಮಾನ್ ಯು.ಎನಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಂನ ಅಧ್ಯಕ್ಷ ದಿನೇಶ್ ಚಂದ್ರಶೇಖರ ದೇವಾಡಿಗ ನಾಗೂರು ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾರ್ಪೋರೇಶನ್ ಬ್ಯಾಂಕ್ ಸಹಾಯಕ ಮಹಾ ಪಬಂಧಕರ (ಎ.ಜಿ.ಎಂ) ರಾದ ಮಹಾಲಿಂಗ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಉದ್ಯಮಿ ಕೊಡಗೈ ಧಾನಿ ಮತ್ತು ಎಲ್.ಜಿ ಪೌಂಡೇಶನ್‍ನ ಪ್ರವರ್ತಕರಾದ ನಾಗರಾಜ.ಡಿ ಪಡುಕೋಣೆಯವರಿಗೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಹೊರನಾಡ ಕನ್ನಡಿಗ ವಿಭಾಗಕ್ಕೆ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪ್ರರಸ್ಕøತರಾದ ಬಿ.ಜಿ ಮೋಹನ ದಾಸ್, ಮತ್ತು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಸ್ವೀಕರಸಿಸ ಯಕ್ಷಗಾನ ಕಲಾವಿದರಾದ ಆನಂದ ಶೆಟ್ಟಿ ಐರಬೆಲ್ ಮೊದಲಾದವರನ್ನು ಗುರುತಿಸಿ ಗೌರವಿಸಲಾಯಿತು. ಸಭೆಯಲ್ಲಿ ಎಚ್.ಎಸ್. ದೇವಾಡಿಗ. ದೇವಾಡಿಗ ಸಂಘ ದುಬೈನ ಅಧ್ಯಕ್ಷರಾದ ದಿನೇಶ್ ಕುಮಾರ್ ದೇವಾಡಿಗ ಉದ್ಯಮಿ ಪ್ರಮೀಣ ಶೆಟ್ಟಿ ವಕ್ವಾಡಿ, ಶೇಖರ ಶೆಟ್ಟಿ ಸುರೇಶ್ ಶೇರುಗಾರ್, ಮಲ್ಲಿಕಾರ್ಜುನ, ಕದಂನ ಗೌರವಾಧ್ಯಕ್ಷರಾದ ಶೀನ ದೇವಾಡಿಗ ಮರವಂತೆ, ರಾಜು ದೇವಾಡಿಗ ತ್ರಾಸಿ, ಉಪಾಧ್ಯಕ್ಷ ಸುರೇಶ್ ದೇವಾಡಿಗ ಕಂಚಿಕಾನ್, ಕಾರ್ಯದರ್ಶಿ ನಾರಾಯಣ ಬಡಾಕರೆ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ವಾರ್ಷಿಕ ವರದಿಯನ್ನು ಕದಂನ ಉಪಾಧ್ಯಕ್ಷ ಸುಧಾಕರ ದೇವಾಡಿಗ ತ್ರಾಸಿ ಮಂಡಿಸಿದರು, ಸಭೆಗೆ ಆಗಮಿಸಿದ ಅತಿಥಿಗಳನ್ನು ಸಂಘದ ಉಪಾಧ್ಯಕ್ಷರಾದ ನಿತ್ಯಾನಂದ ಬೆಸ್ಕೂರು ಸ್ವಾಗತಿಸಿದರೆ, ಕಾರ್ಯಕ್ರಮವನ್ನು ಸಂತೋಷ ಶೇರಿಗಾರ್ ಮತ್ತು ಆಶಾ ಶ್ರೀಧರ ದೇವಾಡಿಗ ನಿರೂಪಿಸದರು.

ಕಾರ್ಯಕ್ರಮದುದ್ದಕ್ಕು ಕದಂ ಸದಸ್ಯರು ಮತ್ತು ಅವರ ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕøತಿಕ ಕಾರ್ಯಕ್ರಮ ನೆರೆವೇರಿಸಲಾಯಿತು.

ಸಾಂಸ್ಕøತಿಕ ಕಾರ್ಯಕ್ರಮವನ್ನು ಸಂತೋಷ ಕೊನ್ನಾಡು ಮತ್ತು ಶ್ರೀಧರ ದೇವಾಡಿಗ ಬ್ರಹ್ಮವಾರ ನೆರೆವೇರಿಸಿದರೆ, ಸಭೆಯ ನಂತರ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಮಾರಣಕಟ್ಟೆ ಮೇಳದ ಆಯ್ದ ಕಲಾವಿದರಿಂದ ಕುಶಲವ ಕಾಳಗ ಎಂಬ ಪೌರಾಣಿಕ ಪ್ರಸಂಗವನ್ನು ಆಡಿತೋರಿಸಲಾಯಿತು. ಯಕ್ಷಗಾನ ಎಲ್ಲಾ ಕಲಾವಿದರನ್ನು ಗುರುತಿಸಿ ಗೌರವಿಸಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)