ಮೋದಿ ಸರಕಾರ ಶ್ರೀಮಂತರ ಪರ, ಬಡವರ ವಿರೋಧಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಿವೇಶನ ರಹಿತರ ಅನಿದಿ೯ಷ್ಟಾವಧಿ ಪ್ರತಿಭಟನೆಯಲ್ಲಿ ತಿರುನವುಕ್ಕರಸು ಆರೋಪ

0
297

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಶ್ರೀಮಂತರ ಬಂಡವಾಳಶಾಹಿಗಳ ಪರವೇ ಹೊರತು,ಬಡವರು,ಕಾಮಿ೯ಕರ ಪರ ಇಲ್ಲ.ಬಡವರಿಗೆ ಯೋಜನೆ ನೀಡುವ ಬದಲು ಇರುವ ಯೋಜನೆಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಅಧ್ಯಕ್ಷ ತಿರುನವುಕ್ಕರಸು ಆರೋಪಿಸಿದರು. ಕನಾ೯ಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು 18,ನವಂಬರ್,2019 ರಿಂದ ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟ ಅನಿದಿ೯ಷ್ಟಾವಧಿ ಧರಣಿ ಮುಷ್ಕರಕ್ಕೆಚಾಲನೆ ಕೊಟ್ಟು, ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂನವೇಶನ ಕೊಡುವುದು ಕೇಂದ್ರಹಾಗೂ ರಾಜ್ಯ ಸರಕಾರಗಳ ಜವಾಬ್ದಾರಿ.ಆದರೆ ಕಳೆದ ಏಳು ದಶಕಗಳಿಂದ ಕಾಂಗ್ರೇಸ್ ಹಾಗೂ ಬಿಜೆಪಿ ಸರಕಾರಗಳು ನಿವೇಶನ ರಹಿತರನ್ನು ಕಣ್ಣೆತ್ತಿಯೂ ನೋಡಿಲ್ಲ,ಈಗಿನ ಮೋದಿ ಸರಕಾರವೂ ಅದೇ ಹಾದಿಯಲ್ಲಿ ಸಾಗಿದೆ ಎಂದು ದೂರಿದರು. ಪ್ರಸ್ತುತ ಕೇಂದ್ರ ಸರಕಾರವು ಬಂಡವಾಳ ಶಾಹಿಗಳಿಗೆ ರೂ 17 ಲಕ್ಷ ಕೋಟಿ ನೀಡಿದ್ದು,ರೂ3500 ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಿದೆ,ಆದರೆ ಬಡವರಿಗೆ ಉದ್ಯೋಗ ನೀಡದೆ ವಂಚನೆ ವಂಚನೆ ಮಾಡಲಾಗುತ್ತಿದೆ.ಸಾಮಾಜಿಕ ಭದ್ರತೆಗೆ ಕೇಂದ್ರ ಸರಕಾರ ನೀಡುತ್ತಿರುವ ಅನುದಾನವನ್ನು ಕಡಿತ ಮಾಡಲಾಗಿದೆ.ಸರಕಾರ ಆಥಿ೯ಕ ಹಿಂಜರಿತಕ್ಕೆ ಒಳಗಾಗಿದೆ.ಸರಕಾರದ ಖಜಾನೆ ಖಾಲಿಯಾಗಿದೆ.ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇಲ್ಲವಾಗಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆ ಸಂದಭ೯ ಬಂಡವಾಳ ಶಾಹಿ ಗಳಿಂದ ರೂ 1150 ಕೋಟಿ ಪಾಟಿ೯ಫಂಡ್ ದೇಣಿಗೆ ರೂಪದಲ್ಲಿ ಪಡಕೊಂಡಿದೆ.ಆದ್ದರಿಂದ ಸರಕಾರ ಎಂದಿಗೂ ಅವರ ಪರವಾಗಿಯೇ ಇರುತ್ತದೆ ಎಂದು ಟೀಕಿಸಿದರು.ಸರಕಾರ ಜಿಲ್ಲೆಯಲ್ಲಿ ಸ್ವಂತಮನೆ ಇಲ್ಲದವರನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಲು ಜಾಗ ಗುರುತಿಸಿ ಹಕ್ಕುಪತ್ರ ನೀಡಬೇಕೆಂದು ಎಂದು ಪ್ರತಿಭಟನಾಕಾರರು ಒತ್ತಾಯಿ ಸಿದರು. ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ ಕೋಣಿ,ಜಿಲ್ಲೆಯ ಅಹ೯ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸರಕಾರಿ/ಖಾಸಗಿ ಜಾಗ ಗುರುತಿಸಿ ಹಕ್ಕು ಪತ್ರ ನೀಡಬೇಕು,ಜಿಲ್ಲೆಯ ಡೀಮ್ಡ್ ಪಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಬೇಕು,ಕುಂದಾಪುರ ತಾಲೂಕಿನಲ್ಲಿಖಾಸಗಿ ಜಾಗ ಕರೀದಿಸಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

 ಬೇಡಿಕೆಗಳು:ಉಡುಪಿ ಹೋಬಳಿಯಲ್ಲಿ ಸರಕಾರಿ ದಾಖಲೆ ಪ್ರಕಾರ 25 ಗ್ರಾಮಗಳಲ್ಲಿ 280 ಎಕ್ರೆ ಜಾಗವನ್ನು 985 ಮಂದಿ ಹಾಗೂ ಕಾಪು ಹೋಬಳಿಯಲ್ಲಿ 55 ಗ್ರಾಮಗಳಲ್ಲಿ 1937 ಮಂದಿ ಒಟ್ಟು 687.73 ಎಕ್ರೆ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದು ಕೂಡಲೆ ಇದನ್ನು ತೆರವುಗೊಳಿಸಿ,ಬಡ ನಿವೇಶನ ರಹಿತರಿಗೆ ಹಂಚಬೇಕು.ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 1000 ಕ್ಕೂ ಅಧಿಕ ನಿವೇಶನ ರಹಿತರಿಂದ ತಲಾ ರೂ:500=00 ನಂತೆ ಠೇವಣಿ ಪಡೆದು 19 ವಷ೯ ಕಳೆದರೂ ನಿವೇಶನ ಹಂಚಿಕೆ ಮಾಡದೆ ವಂಚನೆ ಎಸಗಲಾಗಿದೆ. ಕೊರಂಗ್ರಪಾಡಿ,ಪುತ್ತೂರು ಕೆಳಾಕ೯ಳ ಬೆಟ್ಟು ಹಾಗೂ 80 ನೇಬಡಗುಬೆಟ್ಟು ಗ್ರಾಮಗಳಲ್ಲಿ ಗುರುತಿಸಲಾಗಿರುವ 115.66 ಎಕ್ರೆ ಜಾಗದಲ್ಲಿ ಬಡಾವಣೆ ಗಳನ್ನು ರಚಿಸಿ ನಿವೇಶನ ಹಂಚಬೇಕು. ಕುಂದಾಪುರ ತಾಲೂಕಿನಲ್ಲಿ 224 ಮಂದಿ ಯಿಂದ ಒಟ್ಟು368.18 ಎಕ್ರೆ ಭೂಮಿ ಅತಿಕ್ರಮಣಗೊಂಡಿದ್ದು ಕೂಡಲೇ ತೆರವುಗೊಳಿಸಿ ಹಂಚಬೇಕು. ಉಡುಪಿ ಜಿಲ್ಲೆಯ ಡೀಮ್ಡ್ ಪಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿ ಸರಕಾರಿ ಜಾಗದಲ್ಲಿ ವಾಸವಾಗಿರುವ ಮಂದಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ರಹಿತರ ಧರಣಿ ಮುಷ್ಕರದ 2 ನೇ ದಿನದ ಆರಂಭದಲ್ಲಿ ಸಿಐಟಿಯು ಹಿರಿಯ ಮುಖಂಡ ಪಿ.ವಿಶ್ವನಾಥ ರೈ ಧರಣಿ ಮುಷ್ಕರದ ಹೋರಾಟಕ್ಕೆ ಚಾಲನೆ ಕೊಟ್ಟು ನಿವೇಶನ ರಹಿತರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈ ಕೂಡಲೇ ಪರಿಹರಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯ ಮಾಡಿದರು, ನಿವೇಶನ ರಹಿತರಿಗೆ ನ್ಯಾಯ ಸಿಗದಿದ್ದಲ್ಲಿ ಜಿಲ್ಲೆಯ ಸಂಘಟಿತ ಕಾಮಿ೯ಕ ವಗ೯ ಸಿಐಟಿಯು ನೇತೃತ್ವದಲ್ಲಿ ನಿಣಾ೯ಯಕ ಹೋರಾಟಕ್ಕೆ ದುಮುಕಲಿದೆ ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದರು.ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ,ಕೆ.ಶಂಕರ, ನಿವೇಶನ ರಹಿತರ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ ಎದುರಿನ ನವೇಶನರಹಿತರ ಹೋರಾಟದಲ್ಲಿ ಜಿಲ್ಲೆಯಾದ್ಯಂತ ಸುಮಾರು 60 ಹಳ್ಳಿಗಳಿಂದ ನಿಗದಿ ಪಡಿಸಿದಂತೆ ವಿವಿಧ ದಿನಗಳಲ್ಲಿಹಂತ ಹಂತವಾಗಿ ಹೋರಾಟದಲ್ಲಿ ಬಹಳ ಉತ್ಸುಕತೆಯಿಂದ ನಿವೇಶನ ರಹಿತರು ಭಾಗವಹಿಸುತ್ತಿದ್ದಾರೆ,ಅಂತೆಯೇ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಗೊಳಪಟ್ಟ, ಗುಂಡ್ಮಿ, ಚಿತ್ರಪಾಡಿ, ಕಾಕ೯ಡ, ಪೇರಂಪಳ್ಳಿ ಹಾಗೂ ಕೊಟೇಶ್ವರ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ, ಕುಂಭಾಶಿ, ಹಂಗಳೂರು ಗ್ರಾಮಗಳ ಬಡ ನಿವೇಶನರಹಿತ ಅಹ೯ ಫಲಾನುಭವಿ ಸುಮಾರು 300 ಕ್ಕೂ ಹೆಚ್ಚು ಮಂದಿ ಹೋರಾಟದಲ್ಲಿ ಭಾಗವಹಿಸಿದ್ದರು.

3 ನೇ ದಿನದ ಅನಿದಿ೯ಷ್ಟಾವಧಿ ಧರಣಿಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್-ಡಿವೈಎಪ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿ ಮಾತನಾಡುತ್ತಾ, ಜಿಲ್ಲೆಯಾದ್ಯಂತ ಮನೆ ನಿವೇಶನ ರಹಿತರು ತುಂಡು ಭೂಮಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಯಯುತ ಭೂಮಿ ಹಕ್ಕಿನ ಬೇಡಿಕೆಗಳನ್ನು ಸರಕಾರ ಕೂಡಲೇ ಸರಕಾರ ಪರಿಹರಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಇಲ್ಲವಾದರೆ ನಿವೇಶನ ರಹಿತರಪರವಾಗಿ ಯುವಜನ ಸಂಘಟನೆ ಬೆಂಬಲಿಸಿ ಬೀದಿಗಿಳಿದು ಬೇಡಿಕೆ ಈಡೇರಿಸಲು ತೀವ್ರವಾದ ಹೋರಾಟಕ್ಕೆದುಮುಕಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು.ಈ ಸಂದಭ೯ದಲ್ಲಿ ಅಪರಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ,ಇದೇ 29,ನವಂಬರ್ 2019ರಂದು ಮಾನ್ಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕೃಷಿಕೂಲಿಕಾರ ಮುಖಂಡರ ಜತೆಅಧಿಕಾರಿಗಳ ಜಂಟಿ ಸಭೆ ನಡೆಸಿ,ಬೇಡಿಕೆ ಈಡೇರಿಸಲಾಗುವುದು ಎಂಬ ಭರವಸೆ ಹಿನ್ನೆಲೆಯಲ್ಲಿ ಧರಣಿ ಮುಷ್ಕರವನ್ನು ಹಿಂಪಡೆಯಲಾಯಿತು.

ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಯು.ದಾಸ ಭಂಡಾರಿ ಸಮಾರೋಪ ಭಾಷಣ ಮಾಡಿದರು. ನಿವೇಶನ ರಹಿತರ ಭೂಮಿ ಹಕ್ಕಿನ ಯಶಸ್ವೀ ಹೋರಾಟದಲ್ಲಿ ಮುಖಂಡರಾದ ಭಾಲಕೃಷ್ಣ ಶೆಟ್ಟಿ,ಕೆ.ಶಂಕರ,ಮಹಾಬಲ ವಡೇರಹೋಬಳಿ,ಸರೇಶ ಕಲ್ಲಾಗರ, ಎಚ್.ನರಸಿಂಹ, ಕವಿರಾಜ್.ಎಸ್.ಎಚ್.ವಿಠಲ ಪೂಜಾರಿ, ಶಶಿಧರ ಗೊಲ್ಲ,ನಳಿನಿ.ಎಸ್.ಉಮೇಶ ಕುಂದರ್,ನಾಗರತ್ನ ನಾಡ,ಪದ್ಮಾವತಿ ಶೆಟ್ಟಿ, ಕಾಂಚನಮಾಲ, ಕುಶಲ, ಬಲ್ಕೀಸ್, ರಾಜೀವ ಪಡುಕೋಣೆ, ಮನೋರಮ ಭಂಡಾರಿ, ಅಮ್ಮಯ್ಯಪೂಜಾರಿ, ಬಿಜೂರು, ರಾಘವೇಂದ್ರ ಉಪ್ಪುಂದ,ಮೊದಲಾದವರು ಇದ್ದರು.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)