ಉಡುಪಿ ರಂಗ ಭೂಮಿ(ರಿ.) ವತಿಯಿಂದ ಪ್ರೊ|ಬಿ.ಜಿ.ಮೋಹನ್ ದಾಸ್ ಗೆ ಹ್ರತ್ಪೂರ್ವಕ ಸನ್ಮಾನ

0
113

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರಂಗ ಭೂಮಿ (ರಿ.)ಉಡುಪಿ ಇದರ ವತಿಯಿಂದ ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿ| ಡಾ. ಟಿ.ಎಂ.ಎ ಪೈ , ದಿ|ಎಸ್.ಎಲ್.ನಾರಾಯಣ ಭಟ್, ದಿ| ಮಲ್ಪೆ ಮಧ್ವರಾಜ್ ಸ್ಮರಣಾರ್ಥ 40 ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಸಂಧರ್ಭದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರನ್ನು ಸನ್ಮಾನಿಸಲಾಯಿತು.

ಕೊಲ್ಲಿಯಲ್ಲಿ ಕನ್ನಡದ ಕಂಪನ್ನ ಪಸರಿಸಲು ಶ್ರಮವಹಿಸಿ ಸಾರ್ಥೈಕ್ಯವನ್ನ ಕಂಡ ಪ್ರೊ|. ಬಿ.ಜಿ. ಮೋಹನ್ ದಾಸ್, ಚಿತ್ರಕಾರ ರಮೇಶ್ ರಾವ್ , ಉಡುಪಿಯ ನೇತ್ರ ವೈದ್ಯ ಡಾ| ಕೃಷ್ಣ ಪ್ರಸಾದ್ ರನ್ನು ಉಡುಪಿಯ ರಂಗ ಭೂಮಿ (ರಿ.)ಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ| ಎಂ.ಜಿ. ವಿಜಯ್ ಯವರು ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ರಂಗ ಭೂಮಿ(ರಿ.) ಅಧ್ಯಕ್ಷರಾದ ಶ್ರೀ ತಲ್ಲೂರು ಶಿವರಾಮ್ ಶೆಟ್ಟಿ ಯವರು ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿ ಮುಖ್ಯ ಅಥಿತಿಗಳಾಗಿದ್ದರು.

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾದ ಶ್ರೀ ರಾಘವೇಂದ್ರ ಭಟ್ ಹಾಗು ಉಪೇಂದ್ರ ಸೋಮಯಾಜಿ ಯವರನ್ನೂ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಕಾರ್ಯದರ್ಶಿ ಶ್ರೀ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ, ಉಪಾಧ್ಯಕ್ಷ ರಾದ ಶ್ರೀ ನಂದ ಕುಮಾರ್ ಧನ್ಯವಾದವಿತ್ತರು. ಸಮಾರಂಭದಲ್ಲಿ ಕಿಕ್ಕಿರಿದ ಕಲಾ ಅಭಿಮಾನಿಗಳು ಸೇರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)