ಕೃಷಿ ಭೂಮಿಗೆ ನುಗ್ಗಿದ ಉಪ್ಪು ನೀರು ಕಟಾವಿಗೆ ಸಿದ್ದವಾದ ಭತ್ತದ ಪೈರು ನೀರು ಪಾಲು

0
104

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಹೊಸಾಡು ಗ್ರಾಮದ ಅರಾಟೆಯ ಮೂಡು ಬೈಲಿನಲ್ಲಿ ಕಟಾವು ಮಾಡಿ ಇಟ್ಟ ಗದ್ದೆಗೆ ರಾತ್ರೋರಾತ್ರಿ ಹೊಳೆಯ ಜಾಗದ ನೀರು ಏಕಾಏಕಿ ನುಗ್ಗಿದ್ದರಿಂದ ಕಟಾವಿಗೆ ಸಿದ್ಧವಾಗಿದ್ದ ಐದು ಎಕ್ರೆ ಒಣಗಿದ ಭತ್ತದ ಪೈರು ಉಪ್ಪುನೀರು ಪಾಲಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ಕೈಗೆ ಬಂದ ತುತ್ತು ಬಾಯಿಗೆ ಬಾರದೆ ನೀರು ಪಾಲಾಗಿದೆ ರೈತರ ಶ್ರಮ ಮಣ್ಣು ಪಾಲಾಗಿದೆ.

ಹೊಳೆಯ ಬದಿಯ ದಡ ತೀರ ತಗ್ಗು ಆಗಿರುವುದರಿಂದ ಈ ರೀತಿ ಸಮಸ್ಯೆ ಪ್ರತಿ ಬಾರಿಯೂ ಮರುಕಳಿಸುತ್ತಾ ಇದ್ದು
ಶಾಶ್ವತ ಪರಿಹಾರವಾಗಿ ದಂಡೆ ಎತ್ತರಿಸ ಬೇಕೆಂದು ರೈತರು ಆಗ್ರಹಿಸಿದ್ದಾರೆ.

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)