K.S.T.A. ಟೈಲರ್ಸ್ ಅಸೋಶಿಯೇಷನ್ ಬೈಂದೂರು ನಗರ ಸಮಿತಿಯ ಸಭೆ

0
76

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

K.S.T.A.  ಟೈಲರ್ಸ್ ಅಸೋಶಿಯೇಷನ್ ಬೈಂದೂರು ನಗರ ಸಮಿತಿಯ ಸಭೆಯು ಇತ್ತೀಚೆಗೆ ಸೇವಾ ಸಂಗಮ ಶಿಶುಮಂದಿರ ಬೈಂದೂರು ಇಲ್ಲಿ ನಡೆಯಿತು. ಸೇವಾ ಸಂಗಮ ಶಿಶುಮಂದಿರ ಬೈಂದೂರು ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಶೆಟ್ಟಿ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಯುತ ಕೆ. ರಾಮಚಂದ್ರ ಜಿಲ್ಲಾಧ್ಯಕ್ಷರು ಉಡುಪಿ, ಶ್ರೀಯುತ ಅಬ್ದುಲ್ ಖಾದರ್ ರಾಜ್ಯ ಕೋಶಾಧಿಕಾರಿ, ಶ್ರೀಯುತ ಮಹಾಬಲ ಮೊಗವೀರ ಅಧ್ಯಕ್ಷರು ಬೈಂದೂರು ನಗರ ಸಮಿತಿ, ಶ್ರೀಮತಿ ಲಕ್ಷ್ಮೀ ಕೋಶಾಧಿಕಾರಿ ನಗರ ಸಮಿತಿ ಬೈಂದೂರು ಹಾಗೂ ಶ್ರೀಯುತ ಗಣೇಶ ಗಾಣಿಗ ಮತ್ತು ಶ್ರೀಯುತ ಬಾಬು ಭಂಡಾರಿ ಇವರೆಲ್ಲರೂ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಆಶಾ ದಿನೇಶ ಹಾಗೂ ಧನ್ಯವಾದ ಸಮರ್ಪಣೆ ಶ್ರೀಯುತ ವೆಂಕಟೇಶ ಟೈಲರ್ ಇವರು ನಡೆಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)