ಆತ್ರಾಡಿಯಲ್ಲಿ ‘ಉತ್ಕøರ್ಷ’ ಯೋಗ ಶಿಬಿರ ಉದ್ಘಾಟನೆ

0
95

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಂಡ್ಸೆ ಆತ್ರಾಡಿಯಲ್ಲಿರುವ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ರಿಂದ 13 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ರವಿಶಂಕರ ಆಶ್ರಮದ ಯೋಗ ಗುರುಗಳಾದ ದೀಪಿಕಾ ಭಟ್ ಅವರು ನಡೆಸಿಕೊಡುವ ವತಿಯಿಂದ ಉತ್ಕøರ್ಷ ಯೋಗ ಶಿಬಿರದ ಉದ್ಘಾಟನೆ ಸೋಮವಾರ ನಡೆಯಿತು.

ಶಿಬಿರವನ್ನು ಕೆರಾಡಿ ವರಸಿದ್ಧಿ ವಿನಾಯಕ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ ಶೆಟ್ಟಿ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು, ಸಹನೆ, ತನ್ನ ಮೇಲೆ ತನಗೆ ನಂಬಿಕೆ ಬೆಳೆಸಿಕೊಳ್ಳಲು ಯೋಗ ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಗ್ರಾಮ ಸೇವಾ ಸಂಘ ಇದರ ಖಜಾಂಚಿ ಕಿಶೋರ್ ಕುಮಾರ್ ಶೆಟ್ಟಿ ಹಕ್ಲಾಡಿ ವಹಿಸಿದ್ದರು. ವಿ.ಎಂ.ಕೆ ಸಂಸ್ಥೆಯ ಪೋಷಕ ಸಂಘದ ಅಧ್ಯಕ್ಷ ಡಾ|ರಾಜೇಶ ಬಾಯರಿ ಚಿತ್ತೂರು, ಆತ್ರಾಡಿಯ ಮಾತೃಭೂಮಿ ಯುವ ಸಂಘಟನೆಯ ಅಧ್ಯಕ್ಷ ಸಂದೇಶ ಕುಮಾರ ಶೆಟ್ಟಿ ಅಡಿಕೆಕೊಡ್ಲು, ಜೇಸಿಐ ಚಿತ್ತೂರು-ಮಾರಣಕಟ್ಟೆಯ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಯೋಗ ಗುರುಗಳಾದ ದೀಪಿಕಾ ಭಟ್ ಉಪಸ್ಥಿತರಿದ್ದರು.

ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಮನ್ವಿತಾ ಎನ್., ಪ್ರತೀಕ್ಷಾ, ಅನನ್ಯಾ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯಿನಿÀ ದೀಪಿಕಾ ಸುಭಾಷ್ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕಿ ಆಶಾರಾಣಿ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)