ಅಡಿಕೆಕೊಡ್ಲು ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

0
128

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ (ಟಿ.ಎಸ್.ಪಿ) ರೂ.25 ಲಕ್ಷ ವೆಚ್ಚದಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಾಡಿಯಿಂದ ಅಡಿಕೆಕೊಡ್ಲುವಿಗೆ ಹೋಗುವ ರಸ್ತೆ ಕಾಂಕ್ರೇಟಿಕರಣಕ್ಕೆ ಗುದ್ದಲಿ ಪೂಜೆ ನ.19ರಂದು ನಡೆಯಿತು.


ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿ, ಅಡಿಕೆಕೊಡ್ಲು ಭಾಗದ ಬಹುದಿನ ಬೇಡಿಕೆ ಇದಾಗಿದ್ದು, ಈಗ 25 ಲಕ್ಷ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಆತ್ರಾಡಿ ಶಾಲೆ ಭಾಗಕ್ಕೆ ಹಾಗೂ ಅಡಿಕೆಕೊಡ್ಲು ತನಕ ರಸ್ತೆ ಕಾಂಕ್ರೀಟಿಕರಣಕ್ಕೆ ಆಧ್ಯತೆ ನೀಡುತ್ತೇನೆ. ಜನರ ಬೇಡಿಕೆಗಳಿಗೆ ಸ್ಪಂದಿಸಿ, ಹಂತಹಂತವಾಗಿ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ವೈದ್ಯರಾದ ಡಾ|ಅತುಲ್ ಕುಮಾರ್ ಶೆಟ್ಟಿ, ಗ್ರಾ.ಪಂ.ಮಾಜಿ ಅಧ್ಯಕ್ಷ ವಿ.ಕೆ ಶಿವರಾಮ ಶೆಟ್ಟಿ, ಗೋಪಾಲ ಶೆಟ್ಟಿ ಕೊಳ್ತ, ಶಿಕ್ಷಕ ಗಣೇಶ ದೇವಾಡಿಗ ಅಡಿಕೆಕೊಡ್ಲು, ಸಂದೇಶ ಕುಮಾರ ಶೆಟ್ಟಿ, ಮಂಜುನಾಥ ಎ.ಜಿ., ಗುತ್ತಿಗೆದಾರರಾದ ಪ್ರಕಾಶ ಪೂಜಾರಿ ಜೆಡ್ಡು, ರಾಜೇಶ ಶೆಟ್ಟಿ, ಸಿವಿಲ್ ಗುತ್ತಿಗೆದಾರ ಎಲ್.ಎನ್.ಆಚಾರ್ಯ,ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಪುರೋಹಿತ ಸುರೇಶ ಐತಾಳ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)