ಗೋಬರ್ ಗ್ಯಾಸ್ ಮಾಹಿತಿ ಕಾರ್ಯಗಾರ

0
175

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ಬೈಂದೂರು ತಾಲೂಕು ಹಾಗೂ ಹೊಸಕೋಟೆ ಹಾಲು ಉತ್ಪಾದಕರ ಸಂಘ ಇವರ ಇವರ ಸಂಯುಕ್ತ ಆಶ್ರಯದಲ್ಲಿ ಗೋಬರ್ ಗ್ಯಾಸ್ ಮಾಹಿತಿ ಕಾರ್ಯಗಾರವನ್ನು ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ  ವೆಂಕಟೇಶ್ ರಾವ್ ಉದ್ಘಾಟಿಸಿ ಹೈನುಗಾರಿಕೆ ಮಾಡುವ ಸದಸ್ಯರು ನೈಸರ್ಗಿಕ ಅನಿಲ ಬಳಕೆಯ ಬದಲಿಗೆ. ಗೊಬ್ಬರ್ ಗ್ಯಾಸ್ ರಚನೆಯ ಮೂಲಕ ಹಣ ಉಳಿತಾಯ ಮಾಡಬಹುದು ಕೃಷಿಭೂಮಿಗೆ ಅನುಕೂಲವಾಗಿ ಸಾವಯವ ಗೊಬ್ಬರವನ್ನು ಬಳಕೆ ಮಾಡುವ ಮುಖಾಂತರ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.

 ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ  ಶರತ್ ಶೆಟ್ಟಿ ಉಜ್ವಲ ದೀನಬಂಧು ಸಂಸ್ಥೆ ಸೇನಾಪುರ ಮಾತನಾಡಿ ಗೋಬರ್ ಗ್ಯಾಸ್ ರಚನೆಯ ವಿಧ ಡ್ರಮ್ ಸಿಸ್ಟಮ್ ಹಾಗೂ ಡುಮ್ ಸಿಸ್ಟಮ್ ಅದರ ನಿರ್ವಹಣೆ ಬಳಸುವ ವಿಧಾನ ಜೈವಿಕ ಅನಿಲದ ಉಪಯೋಗ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ರೋಷನ್ ಶೆಟ್ಟಿ ಹಾಗೂ ಶ್ರೀಮತಿ ನಾಗರತ್ನ ಸುಂದರೇಶ್ ರಮೇಶ್ ರಾವ್ ಹಾಗೂ ಒಕ್ಕೂಟದ ಅಧ್ಯಕ್ಷರಾದ ಗಣಪತಿ ಹೆಗಡೆ ವಲಯ ಮೇಲ್ವಿಚಾರಕ ಶ್ರೀನಿವಾಸ್ ಉಪಸ್ಥಿತರಿದ್ದರು ಕೃಷಿ ಅಧಿಕಾರಿ ಮಂಜುನಾಥ್ ನಿರೂಪಿಸಿದರು, ತರಬೇತಿ ಸಹಾಯಕಿ ಕುಮಾರಿ ಮೂಕಾಂಬಿಕಾ ಸ್ವಾಗತಿಸಿದರು, ಸೇವಾಪ್ರತಿನಿಧಿ ಸಂತೋಷ್ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)