ಬೈಂದೂರು : ಗೋ ಸಾಗಟ, 32 ಕೋಣಗಳು ವಶ, ಆರೋಪಿಗಳು ಪರಾರಿ

0
397

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಅಕ್ರಮವಾಗಿ ಹಿಂಸಾತ್ಮಕ ರೂಪದಲ್ಲಿ ಜಾನುವಾರು ಸಾಗಿಸುತ್ತಿದ್ದ ಕಂಟೈನರ್ ಒಂದನ್ನು ಬೈಂದೂರಿನ ನಾಗೂರು ಬಳಿ ನ.15ರ ಶುಕ್ರವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ತಪಾಸಣೆ ನಡೆಸಿದಾಗ ಕಂಟೈನರ್ ನಲ್ಲಿ ಒಟ್ಟು 32 ಕೋಣಗಳಿದ್ದು, ಇವುಗಳ ಪೈಕಿ ಒಂದು ಮೃತಪಟ್ಟಿದೆ. ಇವುಗಳನ್ನು ಗುಜರಾತ್ ನಿಂದ ಮಂಗಳೂರಿಗೆ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಅಕ್ರಮ ಜಾನುವಾರು ಸಾಗಾಟವನ್ನು ತಡೆದಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಂಟೈನರ್ ಸಮೇತ 31 ಕೋಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)