ವಂಡ್ಸೆ : ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆ

0
168

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಂಡ್ಸೆ ವಲಯ ಇವರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ನಡೆಸುವ ¨ಬಗ್ಗೆ ಪೂರ್ವಭಾವಿ ಸಭೆಯನ್ನು ವಂಡ್ಸೆ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಶಶೀರೇಖಾರವರು ಸಾಮೂಹಿಕ ಸತ್ಯನಾರಾಯಣ ಪೂಜೆಯ ಬಗ್ಗೆ ಯಾವ ರೀತಿ ಮಾಡಬೇಕು ಎಂದು ಸವಿಸ್ತಾರವಾಗಿ ವಿವರಿಸಿದರು.

ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಎಚ್, ಕರುಣಾಕರ ಶೆಟ್ಟಿ , ಗೌರವಾಧ್ಯಕ್ಷರಾಗಿ ಉದಯ ಕುಮಾರ ಶೆಟ್ಟಿ ಅಡಿಕೆಕೊಡ್ಲು , ಉಪಾಧ್ಯಕ್ಷರಾಗಿ ಭಾಸ್ಕರ ಪಾತ್ರಿ , ಕೆ .ಶ್ರೀನಿವಾಸ ಪೂಜಾರಿ , ಉದಯ ನಾಯ್ಕ್ , ಕಾರ್ಯದರ್ಶೀಯಾಗಿ ವಂಡ್ಸೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ನೇತ್ರಾವತಿ , ಜೊತೆ ಕಾರ್ಯದರ್ಶೀಯಾಗಿ ಮಹೇಶ ಗಾಣಿಗ ಅಬ್ಬಿ , ಕೋಶಾಧಿಕಾರಿಯಾಗಿ ಶ್ರೀ ಗೋವರ್ಧನ ಜೋಗಿ ಆಯ್ಕೆ ಆಗಿದ್ದರು.

ವಂಡ್ಸೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ , ವಂಡ್ಸೆ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿ.ಕೆ. ಶಿವರಾಮ ಶೆಟ್ಟಿ , ದೇವಸ್ಥಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯ , ವಂಡ್ಸೆ ಒಕ್ಕೂಟದ ಅಧ್ಯಕ್ಷ ಗಿರೀಶ್ ನಾಯ್ಕ್ , ಸಂಘದ ಸದಸ್ಯರು , ಪಧಾಧಿಕಾರಿಗಳು , ಸಾರ್ವಜನಿಕರು , ಸಂಘದ ಮೇಲ್ವಿಚಾರಕಿಯರಾದ ಶ್ರೀಮತಿ ನೇತ್ರಾವತಿ , ಸೇವಾ ಪ್ರತಿನಿಧಿಗಳಾದ ಅಶ್ವಿನಿ , ವನಿತಾ , ವೀಣಾರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಸಂಘದ ಸದಸ್ಯೆ ಶ್ರೀಮತಿ ವನಿತಾ ರವರು ನಿರೂಪಿಸಿದರು. ವಂಡ್ಸೆ ವಲಯದ ಮೇಲ್ವೀಚಾರಕರಾದ ಶ್ರೀಮತಿ ನೇತ್ರಾವತಿಯವರು ಸ್ವಾಗತಿಸಿ ಧನ್ಯವಾದ ಮಾಡಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)