ನ. 18ರಂದು ಜಿಲ್ಲೆಯಾದ್ಯಂತ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರಕ್ಕೆ ಒತ್ತಾಯಿಸಿ ನಡೆಯುವ ಹೋರಾಟಕ್ಕೆ ಪೂರ್ವಭಾವಿ ಸಭೆ

0
108

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ ಜಿಲ್ಲೆಯಾದ್ಯಂತ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಕೊಡಬೇಕೆಂದು ಒತ್ತಾಯಿಸಿ ನವಂಬರ್18 ರಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಿವೇಶನ ರಹಿತರ ಅನಿಧಿ೯ಷ್ಟಾವಧಿ ಧರಣಿ ಮುಷ್ಕರ ಹೋರಾಟ ಕಾಯ೯ಕ್ರಮ ಯಶಸ್ವಿ ಗಳಿಸಲು ಪೂವ೯ಭಾವಿ ಸಿದ್ಧತಾ ಸಭೆ ಕುಂದಾಪುರ ಕಾಮಿ೯ಕ ಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಹಾಗೂ ನಿವೇಶನ ರಹಿತರ ಹೋರಾಟ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಸುಮಾರು 60 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನಿವೇಶನ ರಹಿತರ ಗ್ರಾಮ ಸಮಾವೇಶ ಆಯೋಜಿಸಿ,ಸ್ಥಳೀಯ ಗ್ರಾಮ ಸಮಿತಿ ಆಯ್ಕೆಯಾದ ಮುಖಂಡರ ಸಭೆಯನ್ನು ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟ ಮಾದು ಮಂಡ್ಯ ಇವರು ಉದ್ಘಾಟಿಸಿ ಮಾತನಾಡುತ್ತಾ ,ಸಮಾಜದ ನಿಲ‌೯‌ಕ್ಷಕ್ಕೊಳಪಟ್ಟ ಕಟ್ಟಕಡೆಯ, ರಟ್ಟೆಯ ಶಕ್ತಿಯಕ್ತಿಯಲ್ಲದೆ ಬೇರೇನನ್ನೂ ಹೊಂದಿರದ ಬಡ ಕೂಲಿ ಕಾಮಿ೯ಕರನ್ನು ಅವರ ಹಕ್ಕುಗಳಿಗಾಗಿ ಸಂಘಟಿಸಿ ಹೋರಾಡುತ್ತಿರುವ ದೇಶ ಮಟ್ಟದ ಏಕೈಕ, ಬಲಿಷ್ಟ ಸಮರಶೀಲ ಸಂಘಟನೆಯಾಗಿರುವ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆಯಲ್ಲಿ, ಸದಸ್ಯರಾಗಿ ನಿವೇಶನ ಹಕ್ಕು ಪತ್ರಕ್ಕಾಗಿ ಈ ಹೋರಾಟದಲ್ಲಿ ಸಕ್ರೀಯವಾಗಿ ಬಾಗವಹಿಸಲು ಕರೆ ಕೊಟ್ಟರು.

ಮುಖಂಡರಾದ ವೆಂಕಟೇಶ ಕೋಣಿ, ನಾಗರತ್ನ ನಾಡ, ಸತೀಶ ಖಾವಿ೯,ಪದ್ಮಾವತಿ ಶೆಟ್ಟಿ, ಕಾಂಚನಮಾಲ ಉಪಸ್ಥಿತರಿದ್ದರು.

ವರದಿ:ವೆಂಕಟೇಶ ಕೋಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)