ಶಿರೂರು : ಸರಕಾರಿ ಜಾಗದಲ್ಲಿರುವ ನಿವೇಶನ ರಹಿತರಿಗೆ ಹಕ್ಕು ಪತ್ರ ಕೊಡಲು ಆಗ್ರಹ

0
140

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂಕಾಲನಿಯ ಸರಕಾರಿ ಜಾಗದಲ್ಲಿ ತಲತಲಾಂತರದಿಂದ ವಾಸವಾಗಿರುವ ಸುಮಾರು 65 ಬಡ ಕುಟುಂಬಗಳು ಡೀಸಿ ಮನ್ನಾ ಜಾಗ ಎಂಬ ನೆಪದಲ್ಲಿ ಹಕ್ಕುಪತ್ರವಂಚಿತರಾಗಿದ್ದಾರೆ ಹಾಗೂ ಸರಕಾರಿ ನಿವೇಶನದಲ್ಲಿ (House Site) ಬಹಳ ದೀಘ೯ ಕಾಲದಿಂದ ವಾಸವಾಗಿದ್ದ ನೂರಾರು ಬಡ ಕುಟುಂಬಗಳಿಗೆ ಈ ತನಕ ಭೂಮಿ ಹಕ್ಕು ಪತ್ರ ಕೊಡದ ಸರಕಾರದ ಕ್ರಮವನ್ನು ಮನೆ, ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕ ಶೊಯೆಬ್ ಅರೆಹೊಳೆ ತೀವ್ರ ವಾಗಿ ಖಂಡಿಸಿದರು.

ಶಿರೂರು ಪೇಟೆ ವೆಂಕಟರಮಣ ದೇವಸ್ಥಾನದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ,ನಿವೇಶನ ರಹಿತ ಬಹುತೇಕ ಎಲ್ಲಾ ಅಜಿ೯ದಾರರನ್ನುಅಹ೯ ಪಲಾನುಭವಿಯಾಗಿ ಆಯ್ಕೆ ಮಾಡಿರುವ ಗ್ರಾಮ ಪಂಚಾಯತಿಯನ್ನು ಅಭಿನಂದಿಸಿದರು.ಮುಖಂಡರಾದ ಮಾಮ್ಡು ಜಿಪ್ರಿ ಕಳಿಹಿತ್ಲು, ಅಜಮತ್ತುಲ್ಲ, ರಾಜೀವ ಪಡುಕೋಣೆ,ನಾಗರತ್ನ ನಾಡ, ಅಮ್ಮಯ್ಯ ಪೂಜಾರಿ ವೇದಿಕೆಯಲ್ಲಿ ಇದ್ದರು.

 

ವರದಿ:ವೆಂಕಟೇಶ ಕೋಣಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)