ಉಡುಪಿ : ಫೇಕ್ ಕರೆಯನ್ನು ನಂಬಿ 33,897/- ರೂ. ನಷ್ಟಪಡಿಸಿಕೊಂಡ ಯುವತಿ..!!

0
142

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ : ಉಡುಪಿಯ ಅಂಬಲಪಾಡಿಯಲ್ಲಿ ಮೊಬೈಲ್ ಗೆ ಬಂದ ಫೇಕ್ ಕರೆಯನ್ನು ನಂಬಿ ಓರ್ವ ಯುವತಿಯು ಸುಮಾರು 33,897/- ರೂ. ಕಳೆದುಕೊಂಡ ಘಟನೆ ನಡೆದಿದೆ.

ವಂಚನೆಗೊಳಗಾದ ಯುವತಿಯು ವೆಬ್ ಸೈಟ್ ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದು , ಆಕೆಯ ಮೊಬೈಲ್ ಗೆ ಆರೋಪಿಯು ಬುಧವಾರ ಮಧ್ಯಾಹ್ನ ಕರೆ ಮಾಡಿ ತಾನು ಶೈನ್ ಕಾಮ್ ಕಂಪೆನಿಯಿಂದ ಎಂದು ಯುವತಿಯ ಮೊಬೈಲ್ ಗೆ ಫೇಕ್ ಲಿಂಕ್ ಕಳುಹಿಸಿರುತ್ತಾನೆ. ಆಕೆ ಲಿಂಕ್ ಓಪನ್ ಮಾಡಿದ ಕೂಡಲೇ ಆರೋಪಿ ಬ್ಯಾಂಕ್ ಖಾತೆಯಿಂದ ಸುಮಾರು 33,897/- ರೂ. ಹಣವನ್ನು ವಿದ್ ಡ್ರಾ ಮಾಡಿಕೊಳ್ಳುತ್ತಾನೆ.

ತದನಂತರ ಆರೋಪಿಯಿಂದ ಯಾವುದೇ ಪ್ರತ್ಯುತ್ತರ ಬಾರದೆ ಇದ್ದುದರಿಂದ ತಾನು ಮೋಸಹೋಗಿರುವುದು ಯುವತಿಯ ಗಮನಕ್ಕೆ ಬಂದಿದೆ. ಕೂಡಲೇ ಯುವತಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)