ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ,ನಿವೇಶನ ರಹಿತರ ಸಮಾವೇಶ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿ ವಠಾರದಲ್ಲಿ ಇಂದು ಯಶಸ್ವಿಯಾಗಿ ಜರುಗಿತು.
ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ಸರಕಾರಿ ಜಾಗವನ್ನು ನಿವೇಶನ ರಹಿತ ಅಹ೯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಸರಕಾರ ಮುಂದಾಗಬೇಕು ಎಂದು ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸರಕಾರವನ್ನು ಆಗ್ರಹಿಸಿದರು,ಹಾಗೂ ಡೀಮ್ಡ್ ಪಾರೆಸ್ಟ್ ಕಾನೂನು ತೊಡಕನ್ನು ತೆಗೆದು ಹಾಕಬೇಕು ಎಂದು ಹೇಳಿದರು.
ಈ ಸಂದಭ೯ದಲ್ಲಿ ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ,ಪಂಚಾಯತ್ ನಿವೇಶನ ರಹಿತ ಅಜಿ೯ದರರನ್ನು ಉದ್ದೇಶಿಸಿ ಮಾತನಾಡುತ್ತಾ ಗ್ರಾಮ ಪಂಚಾಯತ್ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಸ್ಥಳ ಖಾದಿರಿಸಲಾಗಿದ್ದು ಅತೀ ಶೀಘ್ರವಾಗಿ ಹಕ್ಕು ಪತ್ರ ವಿತರಣೆ ಯನ್ನು ಮಾಡಲಾಗುವುದೆಂದು ಭರವಸೆ ನೀಡಿದರು. ಮುಖಂಡರಾದ ನಾಗರತ್ನ ನಾಡ, ಸಿಂಗಾರಿ ನಾವುಂದ, ರಾಘವೇಂದ್ರ ಉಪ್ಪುಂದ ಉಪಸ್ಥಿತರಿದ್ದರು.
ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ,ನಿವೇಶನ ರಹಿತರ ಹೋರಾಟ ಸಮಿತಿಯನ್ನು ಸಿಂಗಾರಿ ನಾವುಂದ ರವರ ಸಂಚಾಲಕತ್ವದಲ್ಲಿ ಆಯ್ಕೆ ಮಾಡಲಾಯಿತು. ವರದಿ:ವೆಂಕಟೇಶ ಕೋಣಿ.