ಮಾರಣಕಟ್ಟೆ ಜೇಸಿ ಸಪ್ತಾಹ ಸಮಾರೋಪ ಸಮಾರಂಭ, ಸನ್ಮಾನ

0
104

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೇಸಿಐ ಚಿತ್ತೂರು-ಮಾರಣಕಟ್ಟೆ ವಲಯ ಘಿಗಿ ಜೆ ಸಿ ಸಪ್ತಾಹ ‘ಸ್ಪೂರ್ತಿ ೨೦೧೯’ ಸಮಾರೋಪ ಸಮಾರಂಭ ಇತ್ತೀಚೆಗೆ ಮಾರಣಕಟ್ಟೆಯ ವಾಸುಕಿ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು ಮತ್ತು ಪ್ರಗತಿಪರ ಕ್ರಷಿಕರಾದ ಗುಂಡು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ್ ಶೆಟ್ಟಿ, ಬಾಬು ಹೆಗ್ಡೆ ಮಾಜಿ ಅದ್ಯಕ್ಷರು ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಉಡುಪಿ ಜಿಲ್ಲಾ ಪಂಚಾಯತ್. ನಾಗಪ್ಪ ಕೊಠಾರಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರು. ಜೆ ಸಿ ಐ ಚಿತ್ತೂರು ಮಾರಣಕಟ್ಟೆಯ ಅದ್ಯಕ್ಷ ಜೆ.ಸಿ ಸಂತೋಷ ಕುಮಾರ್ ಶೆಟ್ಟಿ. ಜೆಸಿಐ ಚಿತ್ತೂರು ಮಾರಣಕಟ್ಟೆಯ ಸ್ದಾಪಕ ಅದ್ಯಕ್ಷರಾದ ಜೆ ಸಿ ಉದಯ ಜಿ ಪೂಜಾರಿ, ನಿಕಟ ಪೂರ್ವ ಅದ್ಯಕ್ಷರಾದ ಜೆ ಸಿ ನಾಗೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ಚಿತ್ರಕೂಟ ನೃತ್ಯಕಲಾ ತಂಡದವರಿAದ ಭರತನಾಟ್ಯ ಪ್ರದರ್ಶನ ನೀಡಿದರು. ನಂತರ ಮೂರು ಮುತ್ತು ತಂಡ ಕುಂದಾಪುರ ಇವರಿಂದ ಪಾಪ ಪಾಂಡು ನಾಟಕ ಪ್ರದರ್ಶನ ಮಾಡಿದರು. ಜೆ ಸಿ ಅದ್ಯಕ್ಷ ಜೆ ಸಿ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿ, ಜೆ ಸಿ ರಾಘವೇಂದ್ರ ಹೆಬ್ಬಾರ್ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)