ಬೈಂದೂರು ತಾಲೂಕು ಹಿರಿಯ ನಾಗರಿಕರ ಸಮಾವೇಶ ಬೈಂದೂರು ,ಬಂಕೇಶ್ವರದ ಮಹಾಂಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ವೈಜ್ಞಾನಿಕವಾಗಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಪ್ರಗತಿ, ಸಾಧನೆಮಾಡಿರುವ ಇಸ್ರೇಲ್ ದೇಶಕ್ಕೆ ವಿಶೇಷ ಅಧ್ಯಯನ ಪ್ರವಾಸಕ್ಕಾಗಿ,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಪ್ರಗತಿಪರ ರೈತರ ನಿಯೋಗವು ಇತ್ತೀಚೆಗೆ ಬೇಟಿ ನೀಡಿದ ನಿಯೋಗದ ಪ್ರಮುಖರಲ್ಲೊಬ್ಬರಾದ ಸ್ಥಳೀಯ ಕಂಭದಕೋಣೆ ರೈತ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಯಶಸ್ವಿ ಪ್ರಗತಿಪರ ಕೃಷಿಕ ಪ್ರಕಾಶ್ಚಂದ್ರ ಶೆಟ್ಟಿರವರು ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕಾದರೆ ಅದಕ್ಕೆಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಮಿಶ್ರ ಬೆಳೆಗಳಿಗೂ ಆದ್ಯತೆಗೆ ಒತ್ತು ಕೊಡಬೇಕು ಆಗ ನಮಗೆ ಸಮತೋಲನವಾದ ಆದಾಯ ಮೂಲ ಸದಾ ಪಡೆಯಲು ಸಾಧ್ಯವಾಗುವುದು ಎಂದು
ಅಧ್ಯಕ್ಷತೆಯನ್ನು ಎಚ್. ವಸಂತ ಹೆಗ್ಡೆ ವಹಿಸಿ ಮಾತನಾಡಿದ ಅವರು ಹಿರಿಯ ನಾಗರಿಕ ಸದಸ್ಯರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದರು.
ಈ ಸಂದರ್ಭದಲ್ಲಿ ಸಾಹಿತಿ, ಕವಿ ಪ್ರಶಸ್ತಿ ಪುರಸ್ಕೃತ ಪುಂಡಲೀಕ ನಾಯಕ್ ರವರನ್ನು ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ನಾಗರಿಕರ ವೇದಿಕೆಯ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ ಮದ್ದೋಡಿ, ಕಾಯ೯ದಶಿ೯ ಸಂಜೀವ ಆಚಾಯ೯ ಕಳವಾಡಿ, ನಿವೃತ್ತ ಮುಖ್ಯೋಪಾಧ್ಯಾಯ ತಿಮ್ಮಪ್ಪಯ್ಯ ಬೈಂದೂರು ವೇದಿಕೆಯಲ್ಲಿ ಇದ್ದರು.
ನಿವೃತ್ತ ಅಧ್ಯಾಪಕ ರಾಮ ಶೇರುಗಾರ ವಂದಿಸಿದರು.
ವರದಿ:ವೆಂಕಟೇಶ ಕೋಣಿ