ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯ 110 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

0
174

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸಪ್ತಸ್ವರ ಸ್ವಸಹಾಯ ಸಂಘ ಮತ್ತು ಸ್ವರ ಸಿಂಚನ ಗುಂಪುಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ನೋಟರಿ ಮತ್ತು ವಕೀಲರಾದ ರಾಜಕುಮಾರ್ ನೆಂಪು ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಸಪ್ತಸ್ವರ ಸ್ವಸಹಾಯ ಸಂಘ ಸ್ಥಾಪನೆಯಾಗುವ ಪೂರ್ವದಲ್ಲಿ ಸಲಹೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿ ಸಂಘದ ಬೆಳವಣಿಗೆಗೆ ಕಾರಣರಾದ ಹೆಮ್ಮಾಡಿ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಉದಯ್ ಕುಮಾರ್ ಹಟ್ಟಿಯಂಗಡಿ ಅವರನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಸಿಟಿ ಸೆಂಟರಿನ ಅಧ್ಯಕ್ಷ ಬಾಸ್ಕರ್ ಆಚಾರ್ಯ,ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಭಾಸ್ಕರ ಬಿಲ್ಲವ, ಹಿರಿಯರಾದ ನಾಗೇಶ್ ದೇವಾಡಿಗ, ದೇವಾಡಿಗ ಸಂಘ ಹೆಮ್ಮಾಡಿಯ ಕಾರ್ಯದರ್ಶಿಯಾದ ಮಂಜು ದೇವಾಡಿಗ,ಶಂಕರ್ ದೇವಾಡಿಗ ಸೌಕೂರು ಏಕನಾಥೇಶ್ವರಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪುರುಷೋತ್ತಮದಾಸ್ ಉಪ್ಪುಂದ, ಸಂಘದ ನಿರ್ದೇಶಕರಾದ ಚಂದ್ರ ದೇವಾಡಿಗ,ಬಸವ ದೇವಾಡಿಗ, ಸುಶೀಲಾ ದೇವಾಡಿಗ,ಮಾರಿಕಾಂಬಾ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ರತ್ನಾ ಟಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ 110 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವೈಷ್ಣವಿ ದೇವಾಡಿಗ ತ್ರಾಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸುಕೇಶ್ ವಿ ದೇವಾಡಿಗರ ಪರವಾಗಿ ಅವರ ತಂದೆ ತಾಯಿಗಳನ್ನು ಅಭಿನಂದಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ರವಿ ದೇವಾಡಿಗ ಅತಿಥಿಗಳನ್ನು ಸ್ವಾಗತಿಸಿದರು. ಮಹೇಶ್ ದೇವಾಡಿಗ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)