ಬೈಂದೂರು : ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 64ನೇ ಕನ್ನಡ ರಾಜ್ಯೋತ್ಸವ ಆಚರಣೆ

0
261

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (10) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಬೈಂದೂರಿನಲ್ಲಿ ೬೪ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರರಾದ ವಂದನೀಯ ಫಾದರ್ ಡಾ/ ವಿನ್ಸೆಂಟ್‌ ಜೋರ್ಜ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ರಾಜ್ಯ ಪ್ರಶಸ್ತಿ ಪುರಸ್ಕ್ರತ ಹಿರಿಯ ಸಾಹಿತಿ, ಲೇಖಕರಾದ ಪುಂಡಲೀಕ ನಾಯಕ್ ಇವರು ವಿಶೇಷ ಅತಿಥಿಯಾಗಿ ಆಗಮಿಸಿದ್ದು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಾಯಕ ನಿಜಕ್ಕೂ ಶ್ಲಾಘನೀಯ ಇಲ್ಲಿಯ ಕನ್ನಡ ವಿಭಾಗದ ಕಾರ್ಯಕಲಾಪಗಳ ಕುರಿತು ಅತೀವ ಸಂತೋಷ ವ್ಯಕ್ತಪಡಿಸಿ, ವಿದ್ಯಾರ್ಥಿ ಪ್ರತಿಭೆಗಳು ಅರಳಲು ಇಂತಹ ವೇದಿಕೆಗಳು ಸಾಕ್ಷಿ ಎಂದರು.ಸಮಾರಂಭದಲ್ಲಿ ಶಾಲಾ ಪೋಷಕ ಪ್ರತಿನಿಧಿಗಳು ಶಿಕ್ಷಕ ವ್ರಂದದವರು ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಶಾಲಾ 5ನೇಯ ವಿದ್ಯಾರ್ಥಿ ಸಂಚಿಕೆ ನವಿರು ಅನಾವರಣಗೊಳಿಸಲಾಯಿತು.‌

೧೦ ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಧನುಷ್ ಎಸ್ ಮದ್ದೋಡಿ ಸ್ವ ರಚಿತ ಅಪೂರ್ವ ಕವನ ಸಂಕಲನ ಹಾಗೂ ೯ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರವೀಣಾ ಕಿಣಿ ಸ್ವ ರಚಿತ ನಿನಾದ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ಗಣಕಯಂತ್ರ ಉಪನ್ಯಾಸಕರಾದ ಶ್ರೀಯುತ ರಾಮಚಂದ್ರ ಸ್ವಾಮಿ ರಚನೆಯ ದ್ವಿತೀಯ ಪಿ.ಯು.ಸಿ ಗಣಕಯಂತ್ರ ಪ್ರಶ್ನೋತ್ತರಗಳನ್ನು ಒಳಗೊಂಡ ಗಣಕಯಂತ್ರ ಕೈಪಿಡಿ ಬಿಡುಗಡೆಗೊಳಿಸಲಾಯಿತು.ಕನ್ನಡ ಉಪನ್ಯಾಸಕರಾದ ಉದಯ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

 ವಿದ್ಯಾರ್ಥಿಗಳಾದ ಶಿಶಿರ್ ಡಿ. ಪ್ರವೀಣಾ ಕಿಣಿ ಧನುಷ್ ಎಸ್ ಮದ್ದೋಡಿ ಹಾಗೂ ಶ್ರಿಶಮಾ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವೈಷ್ಣವಿ ಕೊಠಾರಿ ಸ್ವಾಗತಿಸಿ,ಆದಿತ್ಯ ಬಿ.ಎನ್‌‌‌.ರಾವ್ ಇವರು ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (10) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)