ಶಿರೂರು : ಸಮಗ್ರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಟೋಲ್ ಚಲೋ ಅಭಿಯಾನ

0
153

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಬೈಂದೂರು: ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ  ಸ್ಥಳೀಯರ ಸಮಗ್ರ ಬೇಡಿಕೆಗಾಗಿ ಈಡೇರಿಕೆಗಾಗಿ ಆಗ್ರಹಿಸಿ ಟೋಲ್ ಚಲೋ ಅಭಿಯಾನ ಶಿರೂರು ಟೋಲ್ ಗೇಟ್ ಬಳಿ ನಡೆಯಿತು.

ಈಗಾಗಲೇ ಹೆದ್ದಾರಿ ಹೋರಾಟ ಸಮಿತಿ ಮುಂದಾಳತ್ವದಲ್ಲಿ ಸರ್ವಿಸ್ ರಸ್ತೆ ಬೇಡಿಕೆ ಸಲ್ಲಿಸಿದ್ದು ಬೇಡಿಕೆಗೆ ಸ್ಪಂಧಿಸಿದ ಸಂಸದರು ಹೆದ್ದಾರಿ ವಲಯ ಕಛೇರಿ ಅಧಿಕಾರಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸಿದ್ದರು .ಆದರೆ ಹೆದ್ದಾರಿ ಅಧಿಕಾರಿಗಳಿಂದ ಇದುವರೆಗೆ ಸ್ಪಷ್ಟತೆ ದೊರೆತಿಲ್ಲ. ಮಾತ್ರವಲ್ಲ ಸ್ಥಳೀಯ ಪಂಚಾಯತ್ ಸೇರಿದಂತೆ ಪ್ರಮುಖ ಲಿಂಕ್ ರಸ್ತೆಗಳನ್ನು ಕಡಿತಗೊಳಿಸಿದ್ದು ಇದುವರೆಗೆ ದುರಸ್ತಿಗೊಳಿಸಿಲ್ಲ.ಇದರ ಜೊತೆಗೆ  ಕಂಪೆನಿ ಟೋಲ್‍ಗೇಟ್ ಆರಂಭಿಸಲು ಸಿದ್ದತೆ ನಡೆಸುತ್ತಿದೆ.ಸ್ಥಳೀಯ 10.ಕಿ.ಮೀ ವ್ಯಾಪ್ತಿಯ ಒಳಗಿನವರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಟೋಲ್ ಚಲೋ ಅಭಿಯಾನ ನಡೆಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)