ದೇವಾಡಿಗ ಅಕ್ಷಯ ಕಿರಣದ 47ನೇ ಸೇವಾಯಜ್ಞ

0
69

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅನಾರೋಗ್ಯ ಪೀಡಿತರ ಮನೆಗೆ ತೆರಳಿ ಸಿಹಿತಿಂಡಿ ನೀಡಿ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು. ದೇವಾಡಿಗ ಅಕ್ಷಯ ಕಿರಣದ 47ನೇ ಸೇವಾಯಜ್ಞ 20000ರೂ ವೈದ್ಯಕೀಯ ನೆರವು.

ತಲೆಯ ನರದಲ್ಲಿ ರಕ್ತ ಹೆಪ್ಪುಗಟ್ಟಿ ದೇಹದ ಬಲಭಾಗದ ಸ್ವಾಧೀನವನ್ನು ಸಂಪೂರ್ಣವಾಗಿ ಕಳೆದುಕೊಂಡು ಇದೀಗ ಮನೆಯಲ್ಲಿಯೇ ಆಯುರ್ವೇದಿಕ್ ಔಷಧಿ ಹಾಗೂ ಇಂಜೆಕ್ಷನ್ ಪಡೆಯುತ್ತಿರುವ ಯಡೇರಿ ಹೊನ್ನಿತೋಡ್ ಮನೆಯ ಸೂರ ದೇವಾಡಿಗ ಇವರ ಮನೆಗೆ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ತೆರಳಿ 15000-ರೂ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಶ್ರೀ ನಾಗೇಂದ್ರ ದೇವಾಡಿಗ, ಮಧುಕರ್ ದೇವಾಡಿಗ, ಪುರುಷೋತ್ತಮದಾಸ್, ಜಗದೀಶ್ ದೇವಾಡಿಗ, ಅಭಿಷೇಕ್ ದೇವಾಡಿಗ, ರಾಮ ದೇವಾಡಿಗ,ರಾಜ್ ದೇವಾಡಿಗ ಉಪಸ್ಥಿತರಿದ್ದರು.

ಇದಲ್ಲದೇ ಮುಂದಿನ ವೈದ್ಯಕೀಯ ಖರ್ಚಿಗಾಗಿ ಕೊಂಕಣರೈಲ್ವೆ ಉದ್ಯೋಗಿ ಹಾಗೂ ಸೇವಾದಾರರಾದ ಮೋಹನ್ ದೇವಾಡಿಗ ಬಿಜೂರು ಇವರು ವೈಯಕ್ತಿಕವಾಗಿ 5000-ರೂ ನೆರವು ನೀಡಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)