ಉಪ್ಪುಂದ ಮಡಿಕಲ್ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ

0
205

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಎಫ್.ಎಸ್.ಎಲ್ ಇಂಡಿಯಾ ಸಂಸ್ಥೆಯ (ಎನ್.ಜಿ.ಓ) ಸಿಬ್ಬಂದಿಗಳು ಹಾಗೂ ಸಂಸ್ಥೆಯ ವಿದೇಶಿ ವಿದ್ಯಾರ್ಥಿಗಳು (ಸ್ವಯಂ ಸೇವಕರು) ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಹಾಗೂ ಉಪ್ಪುಂದ ರಾಣಿ ಬಲೆ ಒಕ್ಕೂಟ ಹಾಗೂ ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಉಪ್ಪುಂದ ಮಡಿಕಲ್ ತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು.

ನಂತರ ಕಸವನ್ನು ವಿಭಾಗಿಕರಿಸಿ ಗ್ರಾಮ ಪಂಚಾಯತ್ ಕಸ ವಿಲೇವಾರಿಗೆ ಹಸ್ತಾಂತರಿಸಿದರು.

ಕೈಗವಸವನ್ನು ಸುಮುಖ ಸರ್ಜಿಕಲ್ ಪ್ಯಾಕ್ಟರಿ ಮಾಲಿಕರಾದ ಸುರೇಶ್ ಶಟ್ಟಿ ಕೊಡುಗೆಯಾಗಿ ನೀಡಿದರು.

ಉಪ್ಪುಂದ ರಾಣಿ ಬಲೆ ಒಕ್ಕೂಟದ ವತಿಯಿಂದ ಉಪಹಾರ ವ್ಯವಸ್ಥೆ ನೀಡಿದರು.

ಈ ಸಂದರ್ಭದಲ್ಲಿ ಮಂಜೇಶ್ ಬಿ.ಎಲ್, ಮಂಜುನಾಥ ಬಿ, ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಗಣೇಶ ಬಳೆಗಾರ್, ಗ್ರಾ.ಪಂ ಸದಸ್ಯ ಹರಿಶ್ಚಂದ್ರ ಖಾರ್ವಿ, ಸ್ಥಳೀಯ ಮೀನುಗಾರರು ಹಾಗೂ ಸ್ವಯಂ ಸೇವಕರು ಹಾಜರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)