ಬೈಂದೂರು: ಶಿಶುಮಂದಿರ ಚಿತ್ರಕಲಾ ಶಿಬಿರ

0
160

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಬೈಂದೂರು: ಸೇವಾಸಂಗಮ ಶಿಶಿಮಂದಿರದಲ್ಲಿ ಇನ್ನರ್‍ವೀಲ್ ಕ್ಲಬ್‍ನ ಸಹಯೋಗದಲ್ಲಿ ಖ್ಯಾತ ಚಿತ್ರಕಲಾವಿದ ಉಪ್ಪುಂದದ ಮಂಜುನಾಥ ಮಯ್ಯರ ಉಪಸ್ಥಿತಿಯಲ್ಲಿ ಶಿಶುಮಂದಿರದ ಪುಟಾಣಿಗಳಿಗೆ ಒಂದು ದಿನದ ಚಿತ್ರಕಲಾ ಶಿಬಿರವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶುಮಂದಿರದ ಅಧ್ಯಕ್ಷ  ಮಂಜುನಾಥ ಶೆಟ್ಟಿ ವಹಿಸಿದ್ದು, ಅತಿಥಿಗಳನ್ನು ಸ್ವಾಗತಿಸಿದರು.

ಅತಿಥಿಗಳಾಗಿ ಇನ್ನರ್ ವೀಲ್‍ನ ಅಧ್ಯಕ್ಷೆ ನಾಗರತ್ನ ಎಂ. ಶೆಟ್ಟಿ, ಕಾರ್ಯದರ್ಶಿ  ಲತಿಕಾ ನಂಬಿಯಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

ಕಲಾವಿದ ಮಂಜುನಾಥ ಮಯ್ಯರು ವಿವಿಧ ಚಿತ್ರಗಳ ಪರಿಚಯದೊಂದಿಗೆ ಪುಟಾಣಿಗಳಿಂದ ಅವರ ಮನಸ್ಸಿಗೆ ಮುದನೀಡುವ ಬಣ್ಣಗಳೊಂದಿಗೆ ಚಿತ್ರಬಿಡಿಸಲು ತರಬೇತಿ ನೀಡಿ ಚಿತ್ರಕಲಾ ಕೃತಿಗಳನ್ನು ರಚಿಸಿದರು. ಕೊನೆಯಲ್ಲಿ ಉಪಾಧ್ಯಕ್ಷ ಶ್ರೀ ರವೀಂದ್ರ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿ ವ್ಯವಸ್ಥಾಪಕ ಶ್ರೀ ದಿನೇಶ ಪಡುವರಿ ನೆನಪಿನ ಕಾಣಿಕೆ ನೀಡಿ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)