ದೇವಾಡಿಗರ ಸಂಘ ( ರಿ ) ಉಪುಂದ ಇದರ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

0
266

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದೇವಾಡಿಗರ ಸಂಘ ( ರಿ ) ಉಪುಂದ ಇದರ 4ನೇ ವರ್ಷದ ವಾರ್ಷಿಕೋತ್ಸವ,ಮಹಾಸಭೆ,ಸಾಮೂಹಿಕ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಸಮಾರಂಭವು  ಉಪ್ಪುಂದದ ಶಾಲೆಬಾಗಿಲಿನ ಶ್ರೀ ಮಾತೃಶ್ರೀ ಸಭಾ ಭವನದಲ್ಲಿ ನಡೆಯಿತು.

ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

 ಸಂಘದ ಅಧ್ಯಕ್ಷ ಬಿ . ಎ ಮಂಜು ದೇವಾಡಿಗ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಂಘದ ಗೌರವಾಧ್ಯಕ್ಷ  ಜನಾರ್ಧನ್ ಎಸ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೂತನ ಅಧ್ಯಕ್ಷ ಮಾಧವ ದೇವಾಡಿಗ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನರಸಿಂಹ ದೇವಾಡಿಗರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಏಕನಾಥೇಶ್ವರೀ ದೇವಸ್ಥಾನ ಬಾರ್ಕೂರಿನ ಟ್ರಸ್ಟಿಯಾದ ನರಸಿಂಹ ದೇವಾಡಿಗ, ಸುಮೀರಾ ಫುಡ್ಸ್ ಪ್ರೈವೇಟ್ ಲಿ. ಇದರ ನಿರ್ದೇಶಕ ನರಸಿಂಹ ದೇವಾಡಿಗ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ  ಶ್ರೀಮತಿ ಗೌರಿ ದೇವಾಡಿಗ,ಮಹಿಳಾ ಘಟಕದ ಅಧ್ಯಕ್ಷೆ     ಶ್ರೀಮತಿ ನಾಗಮ್ಮ ದೇವಾಡಿಗ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜಗದೀಶ ದೇವಾಡಿಗ,ಶ್ರೀಮತಿ ಪ್ರಮೀಳಾ ಕೆ . ದೇವಾಡಿಗ, ಬಿಜೂರು ಗ್ರಾಮ ಪಂಚಾಯತ್ ಅಧ್ಯಕ್ಷೆ  ಲೋಲಾಕ್ಷಿ ದೇವಾಡಿಗ , ಬೈಂದೂರು ದೇವಾಡಿಗರ ಒಕ್ಕೂಟದ ಅಧ್ಯಕ್ಷ
ನಾರಾಯಣ ದೇವಾಡಿಗ, ಪ್ರಥಮದರ್ಜೆ ಗುತ್ತಿಗೆದಾರ ಮಂಜುನಾಥ್ ದೇವಾಡಿಗ ದಡಾಲಿಮನೆ ಕೆರ್ಗಾಲ್, ಬೈಂದೂರು ತಾಲೂಕು
ಕ .ಸಾ .ಪ ಅಧ್ಯಕ್ಷ ರವೀಂದ್ರ ದೇವಾಡಿಗ ನಾಯ್ಕನಕಟ್ಟೆ, ಬ್ರಹ್ಮಾವರ ಠಾಣೆಯ ಹೆಡ್ ಕಾನ್ಸ್ಟೇಬಲ್ ವೆಂಕಟರಮಣ ದೇವಾಡಿಗ, ವಜ್ರದುಂಬಿ ಗೆಳೆಯರ ಬಳಗದ ಅಧ್ಯಕ್ಷ ರಾಘವೇಂದ್ರ ದೇವಾಡಿಗ ಬಿಜೂರು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಸಂಘದ ಏಳಿಗೆಗೆ ಹಗಲಿರುಳು ಶ್ರಮಿಸಿದ ಅಧ್ಯಕ್ಷರಾದ  ಬಿ ಎ ಮಂಜು ದೇವಾಡಿಗ ಹಾಗೂ ಗೌರವಾಧ್ಯಕ್ಷ ಜನಾರ್ದನ ಎಸ್ ದೇವಾಡಿಗ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸತತ ಎರಡನೇ ಬಾರಿ ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗರನ್ನು ಸನ್ಮಾನಿಸಲಾಯಿತು.ನಮ್ಮ ಸಮಾಜದ ಹಿರಿಮೆ ಸಂಸ್ಕ್ರತ ಪಾಠಶಾಲೆ ತುಮಕೂರಿನ ಸಿದ್ದಗಂಗಾಮಠದ ಸಂಸ್ಕ್ರತ ಶಿಕ್ಷಕಿ ಗೌರಿ ದೇವಾಡಿಗ, ಕುಂದಾಪುರ ವಲಯ ಸೌತ್ ಕೆನರ್ ಫೋಟೋಗ್ರಾಫರ್ ಅಸೋಸಿಯೇಷನ್ ರಿ ಉಪಾಧ್ಯಕ್ಷ ಚಂದ್ರಶೇಖರ ದೇವಾಡಿಗ ಚಾರ್ಟಡ್ ಅಕೌಂಟೆಂಟ್  ಚಂದ್ರ ಎನ್ ದೇವಾಡಿಗ ಓಣಿಮನೆ ಸಾಲಿಮಕ್ಕಿ ಬಿಜೂರು, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುಮನಾ ಮಂಜುನಾಥ ದೇವಾಡಿಗ, 2020ನೇ ಸಾಲಿನ ಜೆಸಿಐ ಉಪ್ಪುಂದದ ನಿಯೋಜಿತ ಅಧ್ಯಕ್ಷ ದೇವರಾಯ ದೇವಾಡಿಗ , ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ರಾಮಕೃಷ್ಣ ಸಭೆಗೆ ಅತಿಥಿಗಳನ್ನು ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿಯಾದ ಪುರುಷೋತ್ತಮದಾಸ್ವ ರದಿವಾಚನಗೈದರು.ಶಿಕ್ಷಕರಾದ  ನಾರಾಯಣ ರಾಜು ದೇವಾಡಿಗ, ಸುಧಾಕರ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ದೇವಾಡಿಗ ಕೊಂಕಣರೈಲ್ವೆ ಸಾಂಸ್ಕ್ರತಿಕ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕರಾದ ಮಂಜುನಾಥ್ ದೇವಾಡಿಗ ಧನ್ಯವಾದಗೈದರು.

ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 80 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

  

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)