ಯಡ್ತರೆ : ಮನೆ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಆಗ್ರಹ

0
226

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 15 ಲಕ್ಷ ಕುಟುಂಬಗಳಿಗೆ ಸ್ವಂತ ಮನೆಗಳಿಲ್ಲವಾಸ್ತವದಲ್ಲಿ ವಸತಿ ರಹಿತರ ಸಂಖ್ಯೆ ಇದಕ್ಕೂ ದೊಡ್ಡದಿದೆ. ಇದರಲ್ಲಿ ಒಂದು ದೊಡ್ಡ ವಿಭಾಗ ಬಾಡಿಗೆ ಮನೆಗಳನ್ನು ಅವಲಂಬಿಸಿದ್ದು, ತಮ್ಮ ದುಡಿಮೆಯ ಬಹು ದೊಡ್ಡ ಪಾಲನ್ನು ಮನೆ ಬಾಡಿಗೆಗೆ ತೆರುತ್ತಾರೆ. ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುವ ಅನಿವಾಯ೯ತೆಗೆ ಒಳಗಾದವರು ಗಣನೀಯ ಸಂಖ್ಯೆಯಲ್ಲಿದ್ದಾರೆ, ದೊಡ್ಡ ಸಂಖ್ಯೆಯಲ್ಲಿ ಕೃಷಿಕೂಲಿ ಕಾಮಿ೯ಕರು ಸ್ವಂತ ಜಮೀನನ್ನು ಹೊಂದದೆ ಸರಕಾರಿ ಭೂಮಿಯಲ್ಲಿ ಅನಧಿಕೃತ ಗುಡಿಸಲುಗಳನ್ನು ಹಾಕಿಕೊಂಡು ಅವುಗಳಲ್ಲೇ ಜೀವನ ಸಾಗಿಸುತ್ತಲಿದ್ದಾರೆ. ಇವರೆಲ್ಲಗೂ ನಿವೇಶನಗಳನ್ನು ಒದಗಿಸಿ ಮನೆಗಳನ್ನು ನಿಮಿ೯ಸಿ ಕೊಡುವುದು ಸರಕಾರದ ಜವಾಬ್ದಾರಿ ಯಾಗಿದೆ. ಎಂದು ಕನಾ೯ಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಕಾಯ೯ದಶಿ೯ ನಾಗರತ್ನ ನಾಡಹೇಳಿದರು.

ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ದಿನಾಂಕ16,ಅಕ್ಟೋಬರ್ 2019 ರಂದು ಜರಗಿದ ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತ ಅಜಿ೯ದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಮನೆ, ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಕೈಗೆ ಸಿಗುವ ತನಕ ಸರಕಾರದ ವಿರುದ್ಧ ನಡೆಸುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಯಡ್ತರೆ ಗ್ರಾಮದ ನಿವೇಶನ ರಹಿತರ ಹೋರಾಟ ಸಮಿತಿಗೆ ಅಬ್ಬಕ್ಕ ಕತ್ಲೆಕಾನ್ ಹಿತ್ತಲು, ಜ್ಯೋತಿ ಶಿವರಾಜ್, ಶ್ಯಾಮಲ ಹೆಗ್ಡೇರ ಮನೆ, ಅಲ್ಫೊನ್ಸ್ ರಬೇರೊ, ನಾಗರತ್ನ ಕುದ್ರಿಸಾಲ್, ಕಲ್ಪನಾ ರವರನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು.

ವರದಿ: ವೆಂಕಟೇಶ ಕೋಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)