ಉಪ್ಪುಂದ : ಕಾಳುಮೆಣಸು ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ

0
114

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ (ರಿ) ಬೈಂದೂರು ತಾಲೂಕು ಹಾಗೂ ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಕಾಳುಮೆಣಸು ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ ಸಾಗರ ಸಭಾಭವನದಲ್ಲಿ ನಡೆಯಿತು.

ಕಂಬದಕೋಣೆ ರೈತ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಇವತ್ತಿನ ರೈತ ತನ್ನ ಕೃಷಿ ತೋಟದಲ್ಲಿ ಕಾಳು ಮೆಣಸು ಬೆಳೆಯುವುದರ ಮೂಲಕ ಕೃಷಿಯಲ್ಲಿ ಸ್ವಾವಲಂಬನೆಯನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಘುರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಗತಿಪರ ರೈತ ಚಂದ್ರಶೇಖರ ಉಡುಪ ಕಾಳಮೆಣಸು ಗಿಡದ ಆಯ್ಕೆ, ನಿರ್ವಹಣೆ, ಗೊಬ್ಬರದ ಬಳಕೆ, ಕೀಟಬಾಧೆ ಹಾಗೂ ರೋಗದ ಹತೋಟಿ ಬಗ್ಗೆ ಮಾಹಿತಿ ನೀಡಿದರು.

ಯೋಜನಾಧಿಕಾರಿ ಶಶಿರೇಖಾ ಯೋಜನೆಯಿಂದ ಸಿಗುವ ಅನುದಾನ ಇತರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಿರಿಮಂಜೇಶ್ವರ ವಲಯ ಒಕ್ಕೂಟದ ಅಧ್ಯಕ್ಷೆ ವೀಣಾ, ಮಾಜಿ ಒಕ್ಕೂಟದ ಅಧ್ಯಕ್ಷೆ ಸುಮಾ ಉಪಸ್ಥಿತರಿದ್ದರು.

ಸಂಘದ 54 ಸದಸ್ಯರಿಗೆ ಕಾಳುಮೆಣಸು ಗಿಡ ವಿತರಿಸಲಾಯಿತು.

ಕೃಷಿ ಅಧಿಕಾರಿ ಮಂಜುನಾಥ ಸ್ವಾಗತಿಸಿದರು, ವಲಯ ಮೇಲ್ವಿಚಾರಕಿ ರುಕ್ಮಿಣಿ ನಿರೂಪಿಸಿದರು, ಸೇವಾ ಪ್ರತಿನಿಧಿ ಸವಿತಾ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)