ಬೈಂದೂರು : ಮನೆ, ನಿವೇಶನ ರಹಿತ ಗ್ರಾಮ ಸಮಾವೇಶ ಉದ್ಘಾಟನೆ

0
162

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಮನೆ, ನಿವೇಶನ ರಹಿತರಿಗೆ ನಿವೇಶನ ಸ್ಥಳ ಗುರುತಿಸಿ, ಭೂಮಿ ಹಕ್ಕು ಪತ್ರ ಕೊಡಬೇಕೆಂದು ಒತ್ತಾಯಿಸಿ ನಿವೇಶನ ರಹಿತರು ದಿನಾಂಕ: 18,ನವಂಬರ್ 2019 ರಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುವ ಅನಿದಿ೯ಷ್ಟಾವಧಿ ಧರಣಿ ಮುಷ್ಕರ ಹೋರಾಟ ಕಾಯ೯ಕ್ರಮದ ಪೂವ೯ ಸಿದ್ಧತೆಗಾಗಿ ಬೈಂದೂರು ವ್ಯಾಪ್ತಿಯ ಮನೆ,ನಿವೇಶನ ರಹಿತರ ಸಮಾವೇಶ ಯಶಸ್ವಿಯಾಗಿ ಜರುಗಿತು.

ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾಜೀವ ಪಡುಕೋಣೆ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ನಿವೇಶನ ರಹಿತರು ಸಂಘಟಿತರಾಗಿ ತಮ್ಮ ಹಕ್ಕಿನ ಭೂಮಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಸರಕಾರದಿಂದ ಆಯ್ಕೆಗೊಂಡ ಅಹ೯ ಫಲಾನುಭವಿ ಅಜಿ೯ದಾರರು ಮಣಿಪಾಲ, ಉಡುಪಿ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟಕ್ಕೆ ಭಾಗವಹಿಸಬೇಕು ಎಂದು ಹೇಳಿದರು.

ಮುಖಂಡರಾದ ನಾಗರತ್ನ ನಾಡ ಸ್ವಾಗತಿಸಿ, ಕೊನೆಗೆ ವಂದಿಸಿದರು.

ವರದಿ:ವೆಂಕಟೇಶ ಕೋಣಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)