ನಾಗೂರು: ಗಾನಯಾನ ಉದ್ಘಾಟನೆ, ಕಲಿಕೆ ಸಾಧನೆಯಾಗಿ ರೂಪುಗೊಳ್ಳಬೇಕು: ಗೋವಿಂದ ಅಡಿಗ

0
134

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಸಂಗೀತದಿಂದ ದೇವರನ್ನೇ ಒಲಿಸಿಕೊಳ್ಳಬಹುದು ಎಂದು ವೇದ, ಪುರಾಣಗಳಿಂದ ತಿಳಿದುಬರುತ್ತದೆ. ಸಂಗೀತದಲ್ಲಿ ತುಡಿತ ಹೊಂದಿರುವ ವಿದ್ಯಾರ್ಥಿಗಳು ಕೇವಲ ಹವ್ಯಾಸಕ್ಕಾಗಿ, ವೃತ್ತಿಗಾಗಿ ಕಲಿಯದೆ, ಅದು ನಿರಂತರ ಕಲಿಕೆಯ ಮೂಲಕ ದೊಡ್ಡ ಮಟ್ಟದ ಸಾಧನೆಯಾಗಿ ರೂಪುಗೊಳ್ಳಬೇಕು ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಗೋವಿಂದ ಅಡಿಗ ಹೇಳಿದರು.
ಅವರು ಅ.13ರಂದು ನಾಗೂರು ಕುಸುಮ ಪೌಂಡೇಶನ್ ಬ್ಲಾಸಂ ಸಂಗೀತ ನೃತ್ಯ ಶಾಲೆ ವತಿಯಿಂದ ಆಡಿಟೋರಿಯಂ ಕುಸುಮ ವೇದಿಕೆಯಲ್ಲಿ ನಡೆದ ತಿಂಗಳ ಸಂಗೀತ ನೃತ್ಯ ಗಾನಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಾಗರ ವೇದನಾದ ಸದ್ಗುರು ಹಿಂದೂಸ್ಥಾನಿ ಸಂಗೀತ ಪಾಠ ಶಾಲೆ ಗಾಯಕಿ ವಸುಧಾ ಶರ್ಮಾ ಉದ್ಘಾಟಿಸಿದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೋವಿಲ್ಲಾಸ ಇಲ್ಲದೇ ಜೀವನವಿಲ್ಲ ಅದರಂತೆ ಉದ್ಯಮದ ಜೊತೆಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ತೋಡಗಿಸಿಕೊಂಡಿರುವ ಕುಸುಮ ಪೌಂಡೇಶನ್ ಸೇವಾ ಕಾರ್ಯವನ್ನು ಶಾಘ್ಲಿಸಿದರು.

ಈ ಸಂದರ್ಭ ಸಂಗೀತ ಕಾರ್ಯಕ್ರಮದ ಪ್ರಾಯೋಜಕ ಬಾಲಚಂದ್ರ ಭಟ್, ಸಂಗೀತ ಶಿಕ್ಷಕಿ ಶ್ವೇತ ಭಟ್ಕಳ ಉಪಸ್ಥಿತರಿದ್ದರು.
ಹಿಂದೂಸ್ಥಾನಿ ಸಂಗೀತ ಪಾಠ ಶಾಲೆ ಗಾಯಕಿ ವಸುಧಾ ಶರ್ಮಾ ಹಾಗೂ ಕೊಲ್ಲೂರು ದೇವಸ್ಥಾನದ ಪ್ರಧಾನ ಅರ್ಚಕ ಗೋವಿಂದ ಅಡಿಗ, ಬಾಲಚಂದ್ರ ಭಟ್ ಇವರನ್ನು ಸಮ್ಮಾನಿಸಲಾಯಿತು.

ನಾಗೂರು ಕುಸುಮ ಪೌಂಡೇಶನ್ ವ್ಯವಸ್ಥಾಪಕ ನಳೀನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)