ಬಿಜೂರು.ಸ.ಹಿ.ಪ್ರಾ.ಶಾಲೆ ಗಾಂಧೀ ಜಯಂತಿ, ಸ್ವಚ್ಚತಾ ಕಾರ್ಯ

0
145

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

        

ಉಪ್ಪುಂದ: ಬಿಜೂರು ಸರಕಾರಿ ಹಿರಿಯಬ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯ ಅ.2ರಂದು ಶಾಲಾ ವೇದಿಕೆಯಲ್ಲಿ ನಡೆಯಿತು.

ನಿವೃತ ಅರಣ್ಯಧಿಕಾರಿ ಉಮೇಶ ದೇವಾಡಿಗ ಗಾಂಧೀಜಿಯ ಬಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ  ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವ ಪಾಲನೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಗ್ರಾ.ಪಂ.ಸದಸ್ಯ ರಮೇಶ ವಿ.ದೇವಾಡಿಗ, ಎಸ್‍ಡಿಎಂಸಿ ಅಧ್ಯಕ್ಷೆ ಇಂದಿರಾ ಶೆಟ್ಟಿ, ಶಾಲಾ ಶಿಕ್ಷಕರು, ಹಳೆವಿದ್ಯಾರ್ಥಿಗಳು ಗಾಂಧೀಜಿಯ ಬಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ, ನಮಿಸಿದರು.

ನಿವೃತ್ತ ಅರಣ್ಯಾಧಿಕಾರಿ ಉಮೇಶ ದೇವಾಡಿಗ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ 2019-20ರ ನಾಮ ಫಲಕವನ್ನು ಅನಾವರಣಗೊಳಿಸಿದರು.

ಗ್ರಾ.ಪಂ.ಸದಸ್ಯ ರಮೇಶ ವಿ.ದೇವಾಡಿಗ ಇವರು ಶಾಲೆಯ ವತಿಯಿಂದ ಆಚರಿಸಲ್ಪಡುವ ರಾಷ್ರ್ಟೀಯ ಹಬ್ಬಗಳ ಮಹಾಪೋಷಕರ ವಿವರಗಳನ್ನೊಳಗೊಂಡ ನಾಮ ಫಲಕವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಎಸ್‍ಡಿಎಂಸಿ ಸದಸ್ಯರಾದ ಕಾಮಾಕ್ಷಿ, ಪ್ರೇಮಾ, ರೇವತಿ, ತುಳಸಿ, ವಿಜಯ, ಶಾರದಾ, ಜಯಶ್ರೀ, ಪದ್ಮಾವತಿ, ಮಣಿಯಮ್ಮ, ಲಲಿತಾ, ಯಶೋಧ, ಚಂದ್ರಾವತಿ, ಲಲಿತಾ, ನಿರ್ಮಲಾ, ನಾಗರತ್ನ, ಜ್ಯೋತಿ, ಸೀತು, ಶಿಕ್ಷಕರು, ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್‍ಡಿಎಂಸಿ ಸದಸ್ಯರು ನೀಡಿದ ಸಿಹಿತಿಂಡಿಯನ್ನು ವಿತರಿಸಲಾಯಿತು. ಗಾಂಧೀ ಜಯಂತಿ ಕಾರ್ಯಕ್ರಮದ ಬಳಿಕ ಶಾಲಾ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಮುಖ್ಯಶಿಕ್ಷಕ ಅನಂತಪದ್ಮನಾಭ ಮಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)