ಕುಂದಾಪುರ : ಪ್ಲಾಸಿಕ್ಟ್ ಮುಕ್ತ ಭೂಮಿಗಾಗಿ ದಿ ಟೇಲ್ ಆಫ್ ವಂದೇಮಾತರಂ ವೀಡಿಯೊ ಆಲ್ಬಂ ಬಿಡುಗಡೆ

0
117

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕುಂದಾಪುರ : ಪ್ಲಾಸ್ಟಿಕ್‍ನಿಂದ ಆಗುತ್ರಿರುವ ಅನಾಹುತ ಎಲ್ಲರಿಗೂ ಅರಿವಿದೆ. ಜಿಲ್ಲಾಡಳಿತ ಅ.2ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸುತ್ತಿದೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಇದಕ್ಕೆ ಪೂರಕವೆಂಬಂತೆ ಪ್ಲಾಸ್ಟಿಕ್ ಮುಕ್ತ ಭೂಮಿಗಾಗಿ ದಿ ಟೇಲ್ ಆಫ್ ವಂದೇಮಾತರಂ ವೀಡಿಯೊ ಆಲ್ಬಂ ರೂಪಿಸಿದ್ದು ಮಂಗಳವಾರ ಅಧಿಕೃತವಾಗಿ ಬಿಡುಗಡೆಗೊಳಿಸಿದೆ ಎಂದು ಕ್ಲೀನ್ ಕುಂದಾಪುರ ತಿಳಿಸಿದರು.

ಕೋಡಿಯ ಕೊಕರೈಸ್ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದಿ ಟೇಲ್ ಆಫ್ ವಂದೇ ಮಾತರಂ ವೀಡಿಯೊ ಕುರಿರಾಗಿನ ವಿವರ ನೀಡಿದರು. ಲೈಫ್‍ಲೈಕ್ ಪ್ರೋಡಕ್ಷನ್‍ನಡಿ ರೂಪಿಸಲಾಗಿರುವ ಸಂಗೀತ ವಿಡಿಯೊವನ್ನು ಕೊಕರೈಸ್ ರೆಸಾರ್ಟ್ ಮತ್ತು ಯುವ ಮೆರಿಡಿಯನ್ ಗ್ರೂಪ್ ಸಹಯೋಗದೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು ವೀಡಿಯೊ ಅಲ್ಬಂ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸತ್ಯ ನಾರಾಯಣ ಮಂಜು, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಸುವಿತ್ ಡ್ಯಾನಿಯಲ್, ಗಾಯಕಿ ಅಕ್ಷತಾ, ಯುವ ಮೆರಿಡಿಯನ್ ಗುಂಪಿನ ಪಾಲುದಾರ ವಿನಯ ಕುಮಾರ್ ಶೆಟ್ಟಿ , ಚಂದ್ರಕಾಂತ ಶೆಣೈ, ಸಚಿನ್ ನಕ್ಕತ್ತಾಯ, ಸರಸ್ವತಿ ಪುತ್ರನ್, ಗಣೇಶ್ ಪುತ್ರನ್ ಮತ್ತಿತರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)