ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರಾಜ್ಯ ಪೋಲಿಸ್ ಮಹಾನಿದೇರ್ಶಕಿ ನೀಲ್ ಮಣೆ ರಾಜು ಭೇಟಿ

0
108

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಆಗಮಿಸಿ ಚಂಡಿಕಾಹೋಮ ನಡೆಸಿದ್ದಾರೆ. ಪತಿ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹ ರಾಜು ಜೊತೆಗಿದ್ದರು.

ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಪತಿ ಡಿ.ಎನ್ ನರಸಿಂಹರಾಜು ಅವರೊಂದಿಗೆ ಸೋಮವಾರ ಸಂಜೆಯೇ ಬಂದು ತಂಗಿದ್ದರು. ಇಂದು ಮುಂಜಾನೆ ಕೊಲ್ಲೂರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ, ಪೂಜೆ ಮಾಡಿಸಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ಚಂಡಿಕಾ ಹೋಮದ ಸಂಕಲ್ಪದಲ್ಲಿ ಸ್ವತಃ ಡಿಜಿಪಿ ಪಾಲ್ಗೊಂಡರು. ಸಂಪೂರ್ಣ ಚಂಡಿಕಾ ಹೋಮ ನಡೆಯುವವರೆಗೆ ಪತಿ ಪತ್ನಿ ಯಜ್ಞಶಾಲೆಯಲ್ಲೇ ಎಲ್ಲಾ ವಿಧಿ ವಿಧಾನಗಳಲ್ಲಿ ಭಾಗಿಯಾದರು.

ಡಿಜಿಪಿ ನೀಲಮಣಿ ರಾಜು ದಂಪತಿಗೆ ಕೊಲ್ಲೂರು ದೇವಾಲಯದ ಆಡಳಿತ ಮಂಡಳಿ ಕಡೆಯಿಂದ ಗೌರವ ಸಮರದಪಿಸಲಾಯ್ತು. ನೀಲಮಣಿ ರಾಜು ಈ ಹಿಂದೆಯೇ ಕೊಲ್ಲೂರಿನಲ್ಲಿ ಚಂಡಿಕಾಹೋಮ ನಡೆಸುವ ಹರಕೆ ಹೊತ್ತಿದ್ದರು ಎಂದು ಆಡಳಿತ ಮಂಡಳಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)