ಉಪ್ಪುಂದ 15ನೇ ಜೇಸಿ ಸಪ್ತಾಹ – 2019 ‘ ಸಮರ್ಜಿತ್ ಸಾಂಸ್ಕ್ರತಿಕ ಚಿಲುಮೆ ಉದ್ಘಾಟನೆ

0
157

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ ಜೇಸಿಐ 15ನೇ ವರ್ಷದ ಜೇಸಿ ಸಪ್ತಾಹ – 2019 ‘ಸಮರ್ಜಿತ್ ಸಾಂಸ್ಕ್ರತಿಕ ಚಿಲುಮೆ ಮಾತೃಶ್ರೀ ಸಭಾಭವನ ಉಪ್ಪುಂದದಲ್ಲಿ ಉದ್ಘಾಟನೆ ಗೊಂಡಿತು. ಬೈಂದೂರು ವಿದಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್ ಸುಕುಮಾರ್ ಶೆಟ್ಟಿಯವರು ಜೇಸಿ ಸಪ್ತಾಹ ಉದ್ಘಾಟಿಸಿದರು.

ಜೇಸಿ ಸಂಸ್ಥೆ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ ಉಪ್ಪುಂದ ಜೇಸಿ ಅಧ್ಯಕ್ಷ ಪುರಂದರ್ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ  ಡಾ . ವೈ . ಭರತ್ ಶೆಟ್ಟಿ, ಬೈಂದೂರು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ  ಜನಾರ್ಧನ ಎಸ್ ಮರವಂತೆ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು . ಪ್ರಕಾಶ್ ಭಟ್ ಉಪ್ಪುಂದ,  ಕುಂದಾಪುರ ಕೊಸ್ಟಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಶೆಟ್ಟಿ, ಉದ್ಯಮಿ ಪ್ರಕಾಶ್ ಐತಾಳ ನಾಗೂರು, ಡಾ.ಪ್ರವೀಣ ಶೆಟ್ಟಿ ಉಪ್ಪುಂದ, ಉದ್ಯಮಿ ಗೋಪಾಲ್ ಕೆ  ಶಿರೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂಬೈನ ಸೆಫ್‌ಟಾಕ್ ಫುಡ್ & ಹಾಸ್ಪಿಟಿಲಿಟಿ ಪ್ರೈ . ಲಿ . ನ ಮಾಲಕ ಗೋವಿಂದ ಬಾಬು ಪೂಜಾರಿ ಅವರಿಗೆ ಸಾಧನಾಶ್ರೀ ಉದ್ಯಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕರಾದವೈ ಭರತ್ ಶೆಟ್ಟಿ ಮತ್ತು ಬಿ.ಎಮ್ ಸುಕುಮಾರ್ ಶೆಟ್ಟಿಯವರಗೆ ಹುಟ್ಟು ಕ್ಷೇತ್ರದ ಸನ್ಮಾನ ನೀಡಿ ಗೌರವಿಸಲಾಯಿತು.

ಪೂರ್ವಾಧ್ಯಕ್ಷರಾದ ಸುಬ್ರಮಣ್ಯ ಜಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಪ್ತಾಹ ಸಭಾಪತಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ , ಕಾರ್ಯದರ್ಶಿ ದೇವರಾಯ ದೇವಾಡಿಗ,ಖಜಾಂಚಿಯಾದ ಗುರುರಾಜ್ ಹೆಬ್ಬಾರ್, ಯೋಜನಾಧಿಕಾರಿಗಳಾದ JCI PPP ಶ್ರೀ ಗಣೇಶ್ ಗಾಣಿಗ,JC ಸುನಿಲ್ ಪೂಜಾರಿ, JFM ಸಂದೀಪ್,JFM ಅವಿನಾಶ್ ಪೂಜಾರಿ ,ಸಲಾಹಗಾರರಾದ ಜೆಸಿ ಶಿವಾನಂದ ಉಪಸ್ಥಿತರಿದ್ದರು. ಬಳಿಕ ಮನು ಹಂದಾಡಿ ತಂಡದವರಿಂದ ನಗೆಹಬ್ಬ ಕುಂದಾಗನ್ನಡೋತ್ಸವ ಕಾರ್ಯಕ್ರಮ ನಡೆಯಿತು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)