ಗುಜ್ಜಾಡಿ : ಮಕ್ಕಳ ಕೈಗೆ ಬೈಸಿಕಲ್‌, ಮುಖದಲ್ಲಿ ಮಂದಹಾಸ

0
168

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿಲಿಯ ಗುಜ್ಜಾಡಿ ಗ್ರಾ.ಪಂ ವ್ಯಾಪ್ತಿಯ ಎಂ. ಭಾಸ್ಕರ ಪೈ ಸರಕಾರಿ ಪ್ರೌಡಶಾಲೆಯಲ್ಲಿ  ಸರಕಾರದಿಂದ ಉಚಿತವಾಗಿ ನೀಡುವ ಸೈಕಲ್ ವಿತರಣೆ ಹಾಗೂ ಪೋಷಕರ ಸಭೆ ಕಾರ್ಯಕ್ರಮ ನಡೆಯಿತು.

ಜಿ.ಪಂ ಸದಸ್ಯೆ ಶೋಭಾ ಪುತ್ರನ್ ರವರು ಸೈಕಲ್ ವಿತಿರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷ ಣ ಸಿಗಬೇಕೆಂಬ ಉದ್ದೇಶಕ್ಕೆ ಸರಕಾರ ಹಲವು ಸೌಲಭ್ಯ ನೀಡುತ್ತಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೆ ಇಂದಿಗೂ ಶಾಲೆಯಿಂದ ದೂರ ಇರುವ ಮಕ್ಕಳಿದ್ದು ಅವರನ್ನು ಶಾಲೆಗೆ ಕರೆತರುವ ಪ್ರಯತ್ನ ಇಡೀ ಸಮುದಾಯ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾರದ ಡಿ ಬಿಜೂರುರವರು  ವಹಿಸಿ ಮಾತನಾಡಿದ ಅವರು ಬದುಕಿನ ನೆಲೆಗೆ ಶಿಕ್ಷ ಣವೇ ಚುಚ್ಚುಮದ್ದು. ಆದ್ದರಿಂದ ಶಿಕ್ಷ ಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸವನ್ನು ಮಾಡಬೇಕು ಎಂದರು.

ಈ ಸಂಧರ್ಭದಲ್ಲಿ, ತಾ.ಪಂ ಸದಸ್ಯ ರಾಜು ದೇವಾಡಿಗ,ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)