ಉಡುಪಿಯ ಮನೆಯೊಂದರ ಅಡುಗೆ ಕೋಣೆ ಡಬ್ಬದಲ್ಲಿಟ್ಟಿದ್ದ 22 ಲಕ್ಷ ರೂ. ಕಳ್ಳತನ!

0
233

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ನಗರದ ಒಳಕಾಡು ಹರಿಶ್ಚಂದ್ರ ಮಾರ್ಗದಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿಟ್ಟಿದ್ದ 22 ಲಕ್ಷ ರೂ. ನಗದು ಹಾಗೂ ಬೆಳ್ಳಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಒಳಕಾಡು ಹರಿಶ್ಚಂದ್ರ ಮಾರ್ಗದ ಛತ್ರಪತಿ ಶಿವಾಜಿ ರೋಡ್‌ ನಿವಾಸಿ ಸುನಂದ ಮಾಣಿಕ್ಯ ಪಾಟೀಲ ಎಂಬವರ ಮನೆಯಲ್ಲಿ ಸೆ. 12ರಂದು ಈ ಘಟನೆ ನಡೆದಿದ್ದು, ಅಡುಗೆ ಕೋಣೆಯೊಳಗೆ ಡಬ್ಬದಲ್ಲಿಟ್ಟಿದ್ದ ಹಣ ಕಳವಾಗಿದೆ.

ಮನೆಯವರು ಪ್ರತಿಷ್ಠಿತ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಟಿಫಿನ್‌ ನೀಡುವ ಸಲುವಾಗಿ ಮಧ್ಯಾಹ್ನ 12.15ಕ್ಕೆ ಮನೆಗೆ ಬೀಗ ಹಾಕಿ ಹೋಗಿದ್ದರು. ಮಧ್ಯಾಹ್ನ 1 ಗಂಟೆಗೆ ವಾಪಸ್‌ ಬಂದು ನೋಡುವಾಗ ಮನೆ ಬಾಗಿಲ ಬೀಗ ಮುರಿದಿದೆ. 22 ಲಕ್ಷ ರೂ. ನಗದು ಹಾಗೂ 30 ಸಾವಿರ ರೂ. ಮೌಲ್ಯದ ಬೆಳ್ಳಿ ಕಳವು ಆಗಿದೆ.

ಈ ಕೃತ್ಯವನ್ನು ಸುನಂದ ಮಾಣಿಕ್ಯ ಪಾಟೀಲರ ಗಂಡನ ಸಂಬಂಧಿ ಸಾಂಗ್ಲಿಯ ಅತುಲ ಬಾಗ್ನೆ ಹಾಗೂ ಇನ್ನೊಬ್ಬ ಸೇರಿ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)