ಬೈಂದೂರು : ಶ್ರೀ ಕೃಷ್ಣ-ರಾಧೆಯ ಪ್ರದರ್ಶನ

0
44

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶುಮಂದಿರ ಬೈಂದೂರು ಇವರ ಆಶ್ರಯದಲ್ಲಿ 34ನೇ ವರ್ಷದಲ್ಲಿ ಬೈಂದೂರು ರೋಟರಿ ಭವನದಲ್ಲಿ ಸಾಮೂಹಿಕ ಶ್ರೀಕೃಷ್ಣ ರಾಧೆಯರ ಪ್ರದರ್ಶನ ಹಾಗೂ ಶ್ರೀಕೃಷ್ಣನ ಬಾಲಲೀಲೆಗಳ ಪ್ರದರ್ಶನದ ನೃತ್ಯವೈಭವವು ಪಾಲಕರ ಶ್ಲಾಘನೆಗೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಸಡೆಸಲಾದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಸೇವಾಸಂಗಮ ಕೇಂದ್ರದ ವಿಶ್ವಸ್ತ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀಮತಿ ಕಲ್ಪನಾ ಭಾಸ್ಕರರವರು ಸೇವಾಸಂಗಮದ ಧ್ಯೇಯೋದ್ದೇಶ ಹಾಗೂ ಕಾರ್ಯವೈಖರಿ ಮತ್ತು ಭಾರತದ ಸಂಸ್ಕøತಿ ರಕ್ಷಣೆಯಲ್ಲಿ ತನ್ನ ಕಾರ್ಯವ್ಯಾಪ್ತಿಯ ಬಗ್ಗೆ ಪಾಲಕರಿಗೆ ತಿಳಿಸಿದರು ಮತ್ತು ಮಾತೆಯರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕøತಿ ಮತ್ತು ಸಂಸ್ಕಾರದ ಬಗ್ಗೆ ತಿಳಿಸುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಬೈಂದೂರು ಬಂಕೇಶ್ವರ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ನಂದಕಿಶೋರ ಬೈಂದೂರು ಸೇವಾ ಸಂಗಮದ ಕಾರ್ಯದರ್ಶಿ ರಾಜೇಶ ಐತಾಳ್, ಉಪಾಧ್ಯಕ್ಷ ರವೀಂದ್ರ ಶ್ಯಾನುಭಾಗ್, ವ್ಯವಸ್ಥಾಪಕ ದಿನೇಶ ಉಪಸ್ಥಿತರಿದ್ದು ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿ ಶಿಶು ಮಂದಿರದಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕøತಿ ಸಂಸ್ಕಾರಗಳನ್ನು ಹೇಳಿಕೊಡುವುದರೊಂದಿಗೆ ಮಕ್ಕಳು ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮಕ್ಕಳನ್ನು ಬೆಳೆಸುವುದೇ ನಮ್ಮ ಗುರಿ ಎಂದು ಹೇಳುವುದರೊಂದಿಗೆ ಶಿಶುಮಂದಿರದ ಕಾರ್ಯಚಟುವಟಿಕೆಯ ಬಗ್ಗೆ ತಿಳಿಸಿ ಪಾಲಕ ಬಂಧುಗಳು ಸಂಸ್ಕøತಿ-ಸಂಸ್ಕಾರವನ್ನು ಉಳಿಸಿ ಬೆಳೆಸಲು ಇನ್ನೂ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ಸಮಿತಿಯ ಸದಸ್ಯರಾದ ನಿವೃತ್ತ ಅಧ್ಯಾಪಕ ಶ್ರೀ ಗುರುರಾಜ್‍ರವರು ಸ್ವಾಗತಿಸಿ, ಶ್ರೀಮತಿ ಆಶಾಕಿಶೋರ್ ವಂದಿಸಿ, ಶ್ರೀ ಸುಧಾಕರ ಪಿ. ಬೈಂದೂರು ನಿರೂಪಿಸಿದರು. ಕೊನೆಯಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಪುಟಾಣಿಗಳಿಂದ ಶ್ರೀ ಕೃಷ್ಣನ ಬಾಲಲೀಲೋತ್ಸವ ನಡೆಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)