ಜೆಸಿಐ ಉಪ್ಪುಂದದ ವತಿಯಿಂದ 15ನೇ ಜೇಸಿ ಸಪ್ತಾಹ 2019ರ ಆಮಂತ್ರಣ ಪತ್ರಿಕೆ ಬಿಡುಗಡೆ

0
70

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೆಸಿಐ ಉಪ್ಪುಂದದ ವತಿಯಿಂದ 15ನೇ ಜೇಸಿ ಸಪ್ತಾಹ 2019ರ ಆಮಂತ್ರಣ ಪತ್ರಿಕೆ ಬಿಡುಗಡೆ ಜೆಸಿಐ ಉಪ್ಪುಂದ ವತಿಯಿಂದ ಸೆಪ್ಟೆಂಬರ್ 15 ರಿಂದ 21ರ ವರೆಗೆ ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನೆಡೆಯಲಿರುವ ಸಮರ್ಜಿತ್ ಸಾಂಸ್ಕ್ರತಿಕ ಚಿಲುಮೆ 15ನೇ ಜೇಸಿ ಸಪ್ತಾಹ 2019ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೋಮವಾರ ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನೆಡೆಯಿತು.

ಪೂರ್ವಾಧ್ಯಕ್ಷರು ಸಪ್ತಾಹದ ಗೌರವ ಸಲಹೆಗಾರರಾದ ಜೆಸಿ ಸೆನೆಟರ್ ಯು ಪ್ರಕಾಶ್ ಭಟ್ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಸಪ್ತಾಹ ಸಲಹೆಗಾರರಾದ ಸುಬ್ರಮಣ್ಯ ಜಿ ಅವರು ಮಾತನಾಡಿ ಸಪ್ತಾಹದ ರೂಪುರೇಷೆ ಕಾರ್ಯಕ್ರಮದ ವಿವರದ ಮಾಹಿತಿ ನೀಡಿದರು.

7 ದಿನಗಳ ಕಾಲ ನೆಡೆಯುವ ಜೇಸಿ ಸಪ್ತಾಹದಲ್ಲಿ ಪ್ರತಿದಿನ ವಿವಿಧ ಸ್ಪರ್ಧೆಗಳು ಹಾಗೂ ಸಂಜೆ 6:30 ರಿಂದ ಸಭಾಕಾರ್ಯಕ್ರಮ ಹಾಗೂ ರಾತ್ರಿ 7:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯಲಿವೆ.

ವೇದಿಕೆಯಲ್ಲಿ ಅಧ್ಯಕ್ಷರಾದ ಪುರಂದರ್ ಖಾರ್ವಿ, ಕಾರ್ಯದರ್ಶಿಯಾದ ದೇವರಾಯ ದೇವಾಡಿಗ, ಸಪ್ತಾಹ ಸಭಾಪತಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಸಪ್ತಾಹ ಸಲಹೆಗಾರರಾದ ಪ್ರಕಾಶ್ ಭಟ್, IPP ಪ್ರಶಾಂತ್ ಪೂಜಾರಿ, ಖಜಾಂಚಿಯಾದ ಗುರುರಾಜ್ ಹೆಬ್ಬಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರು ಹಾಗೂ ಜೆಸಿಐ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.ಕಾರ್ಯದರ್ಶಿಯಾದ ದೇವರಾಯ ದೇವಾಡಿಗ ವಂದಿಸಿದರು. ಸಹ ಸಭಾಪತಿಯಾದ ಪುರುಷೋತ್ತಮದಾಸ್ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)