ಜೆಸಿಐ ಬೈಂದೂರು ಸಿಟಿ ಇವರ ಪ್ರಥಮ ವರ್ಷದ ಜೆಸಿವಿಕ್ – 2019ರ ಉದ್ಘಾಟನಾ ಸಮಾರಂಭ ಹಾಗೂ ಉಚಿತ ದಂತ ತಪಾಸಣಾ ಶಿಬಿರ

0
37

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೆಸಿಐ ಬೈಂದೂರು ಸಿಟಿ ಇವರ ಪ್ರಥಮ ವರ್ಷದ ಜೆಸಿವಿಕ್ – 2019ರ ಉದ್ಘಾಟನಾ ಸಮಾರಂಭ ಹಾಗೂ ಉಚಿತ ದಂತ ತಪಾಸಣಾ ಶಿಬಿರ ಮತ್ತು ಕಿಟ್ ವಿತರಣಾ ಸಮಾರಂಭ ಸೋಮವಾರ ಬೈಂದೂರು ಆಶ್ರಯ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಜೆಸಿಐ ವಲಯ 15ರ ರೀಜನ್ ಎ ವಿಭಾಗದ ಉಪಾಧ್ಯಕ್ಷ ಜೇಸಿ. ಸೆನಿಟರ್ ಅಬ್ದುಲ್ ಜಬ್ಬಾರ್ ಸಾಹೇಬ್ ಅವರು ಪ್ರಥಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೇಸಿ. ಮಣಿಕಂಠ ಎಸ್ ವಹಿಸಿದ್ದರು.

ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ. ವೀಣಾ ಶಿರೂರು ಬಿ. ಡಿ. ಎಸ್. ಅವರು ಆಶ್ರಯ ಶಾಲೆಯ ಮಕ್ಕಳಿಗೆ ಹಲ್ಲಿನ ತಪಾಸಣೆ ನಡೆಸಿದರು.

ಬಳಿಕ ಆಶ್ರಯ ಶಾಲೆಯ ಮಕ್ಕಳಿಗೆ ಉಚಿತ ಕಿಟ್ ವಿತರಿಸಲಾಯಿತು. ದಂತ ತಪಾಸಣೆ ಮಾಡಿದ ಡಾ. ವೀಣಾ ಶಿರೂರು ಅವರನ್ನು ಜೆಸಿಐ ಬೈಂದೂರು ಸಿಟಿಯ ವತಿಯಿಂದ ಸನ್ಮಾಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಬೈಂದೂರು ಆಶ್ರಯ ಶಾಲೆಯ ಮುಖ್ಯೋಪಾಧ್ಯಾಯ ರಾಜೇಶ್, ಜೆಸಿವಿಕ್ ಸಂಯೋಜಕರಾದ ಜೆಸಿ. ಶ್ರೀಧರ್ ಆಚಾರ್, ಜೇಸಿ ರಾಘವೇಂದ್ರ ಹೊಳ್ಳ, ಜೇಸಿ. ಸವಿತಾ ದಿನೇಶ್ ಗಾಣಿಗ ಉಪಸ್ಥಿತರಿದ್ದರು.

ಜೆಸಿಐ ಬೈಂದೂರು ಸಿಟಿಯ ಉಪಾಧ್ಯಕ್ಷ ಜೇಸಿ. ಅಶ್ರಫ್ ಜೇಸಿವಾಣಿ ವಾಚಿಸಿದರು. ಜೇಸಿರೇಟ್ ಅಧ್ಯಕ್ಷೆ ಜೇಸಿ ಪ್ರಿಯದರ್ಶಿನಿ ಬೆಸ್ಕೂರು ಸ್ವಾಗತಿಸಿದರು. ಜೆಸಿವಿಕ್ ಸಭಾಪತಿ ಜೇಸಿ ಸತೀಶ್ ಎಂ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ಜೇಸಿ ಎಚ್ ಸುಶಾಂತ್ ಬೈಂದೂರು ವಂದಿಸಿದರು.
ವರದಿ : ಜೇಸಿ. ಶ್ರೀಧರ್ ಆಚಾರ್ ಪಡುವರಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)