ತ್ರಾಸಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮಹಾಸಭೆ

0
42

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ತ್ರಾಸಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ), ತ್ರಾಸಿ ಗ್ರಾಮದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.06ರಂದು ಮಿಲೇನಿಯಂ ಸಭಾಂಗಣ ತ್ರಾಸಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಶಾರದ ಎಂ.ಡಿ. ಬಿಜೂರು ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ದ.ಕ. ಹಾಲು ಒಕ್ಕೂಟದ ವಲಯದ ವಿಸ್ತಾರಣಾಧಿಕಾರಿ ರಾಜರಾಮ್‍ರವರು ದನಗಳ ಸಾಕಾಣಿಕೆ ಅದಕ್ಕೆ ಬೇಕಾಗುವ ಸಹಾಯದನದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತ್ರಾಸಿ ಗ್ರಾಮ ಪಂಚಾಯತ್ ಪಿ.ಡಿ.ಓ ಶೋಭಾ, ತ್ರಾಸಿ ಚರ್ಚಿನ ಧರ್ಮಗುರು ಚಾಲ್ರ್ಸ್ ಲೂವೀಸ್, ಸಂಘದ ನಿರ್ದೇಶಕರಾದ ವರದಾ ಪೂಜಾರಿ, ಸವಿತಾ ಮೊಗವೀರ, ಅನಿತಾ ಶೆಟ್ಟಿ, ಬೇಬಿ ದೇವಾಡಿಗ, ಕುಸುಮಾ ದೇವಾಡಿಗ, ಜಲಜ ಪೂಜಾರಿ, ಐರಿನ್ ಡಿ’ ಸಿಲ್ವಾ, ಗುಲಾಬಿ ಮೊಗವೀರ, ಕಾವೇರಿ ಪೂಜಾರಿ, ಹಾಗೂ ವನಜಾ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಎಂ ವರದಿ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)