ಕೊಲ್ಲೂರು ಕಾಶಿಹೊಳೆಯಲ್ಲಿ ಸ್ನಾನಕ್ಕೆಂದು ಹೋದ ವ್ಯಕ್ತಿ ನೀರುಪಾಲು ಸೌಪರ್ಣಿಕ ನದಿಯಲ್ಲಿ ಶವವಾಗಿ ಪತ್ತೆ

0
104

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕುಂದಾಪು : ಸುರಿಯುವ ಮಳೆಯಲ್ಲಿ ತುಂಬಿ ಹರಿಯುತ್ತಿರುವ ನದಿಗೆ ಇಳಿದು ಜೀವದ ಹಂಗು ತೊರೆದು, ಅಗ್ನಿಶಾಮಕ ಸಿಬ್ಬಂದಿಯೋರ್ವರು ಮೃತದೇಹವನ್ನು ಮೇಲೆತ್ತಿದ್ದ ಘಟನೆ ಕೊಲ್ಲೂರು ನಲ್ಲಿ ನಡೆದಿದೆ.

ಕುಂದಾಪುರ ಅಗ್ನಿಶಾಮಕ‌ ದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಈ ಸಾಹಸ ಮೇರೆದ ಫೈರ್ ಮೆನ್‌. ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ಕೊಲ್ಲೂರು ಸೌಪರ್ಣಿಕಾ ಹೊಳೆಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿತ್ತು. ಸುಮಾರು 65 ವರ್ಷ ಪ್ರಾಯದ ಅಪರಿಚಿತ ವೃದ್ಧರೋರ್ವರು ನಿತ್ಯ ಕರ್ಮಕ್ಕಾಗಿ ನದಿ ಸಮೀಪ ತೆರಳಿದ್ದು ಕಾಲು ಜಾರಿ ಬಿದ್ದ ಅವರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟು, ನದಿಯ ಮಧ್ಯದ ಮರದಲ್ಲಿ ಶವ ಸಿಲುಕಿಕೊಂಡಿತ್ತು‌.

ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಕುಂದಾಪುರ ಅಗ್ನಿಶಾಮಕ ದಳದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ನಾಗರಾಜ ಪೂಜಾರಿ ತುಂಬಿ ಹಿರಿಯುವ ಸೌಪರ್ಣಿಕಾ ನದಿಯನ್ನು ನೋಡಿ ಅಂಜದೆ ನೀರಿನ ಸೆಳೆತದ ನಡುವೆ ನದಿಗೆ ಧುಮುಕಿ ಮೃತದೇಹ ಮೇಲಕ್ಕೆ ತೆಗೆದಿದ್ದಾರೆ. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಇಂತಹ ಸಾಹಸ ಮೆರೆದಿರುವ ನಾಗರಾಜ್ ಪೂಜಾರಿ ಕುಂದಾಪುರ ಅಗ್ನಿಶಾಮಕ ದಳದ ರಿಯಲ್ ಹೀರೋ ಆಗಿ ಗುರಿತಿಸಿಕೊಂಡವರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)