ವಂಡ್ಸೆ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭೆ, ಸೇವಾ ಪುರಸ್ಕಾರ ಪ್ರದಾನ

0
130

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇವರ 17ನೇ ವರ್ಷದ ಗಣೇಶೋತ್ಸವ ಧಾರ್ಮಿಕ ಸಭೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಬಿ.ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು 2019ನೇ ಸಾಲಿನ ಗಣೇಶೋತ್ಸವ ಸೇವಾ ಪುರಸ್ಕಾರವನ್ನು ಉದಯಕುಮಾರ ಶೆಟ್ಟಿ ಅವರಿಗೆ ಪ್ರದಾನ ಮಾಡಿ, ಶುಭ ಹಾರೈಸಿದರು. ಮುಂಬೈ ಬಿ.ಎ.ಎಸ್ ಕಂಪೆನಿ ಸೆಕ್ರೆಟರಿ ಪ್ರದೀಪ ಚಂದನ್ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವಂಡ್ಸೆ ನಾಡ ಕಛೇರಿ ಕಂದಾಯ ನಿರೀಕ್ಷಕ ಅಶೋಕ ಕುಮಾರ ಬಹುಮಾನ ವಿತರಿಸಿದರು.

ಗ್ರಾ.ಪಂ.ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ, ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ವೈದ್ಯ ಡಾ|ಅತುಲ್ ಕುಮಾರ ಶೆಟ್ಟಿ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಗುಂಡು ಪೂಜಾರಿ ಹರವರಿ, ಶಶಿಧರ ಶೆಟ್ಟಿ ಕೊರಾಡಿಮನೆ ವಂಡ್ಸೆ, ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಗುತ್ತಿಗೆದಾರರಾದ ಎಚ್.ಕರುಣಾಕರ ಶೆಟ್ಟಿ, ಅಧ್ಯಾಪಕ ಪ್ರತಾಪಕುಮಾರ ಶೆಟ್ಟಿ ಪಟೇಲರ ಮನೆ ವಂಡ್ಸೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗ್ರಾ.ಪಂ.ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಅವರಿಗೆ ಸೇವಾ ಪುರಸ್ಕಾರ, ವಿದ್ಯಾರ್ಥಿ ಪ್ರತಿಭೆಗಳಾದ ರಶ್ಮಿತಾ ಪೂಜಾರಿ,ಅಂಕಿತಾ ಶೆಟ್ಟಿ, ಗಗನ್ ಪೈ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ವಿಜಯ ಎಚ್.ಪೂಜಾರಿ ಸ್ವಾಗತಿಸಿದರು. ವಿಠಲ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಮಣಿಕಂಠ ಪೂಜಾರಿ, ಗೋವರ್ಧನ ಜೋಗಿ, ಮಂಜುನಾಥ ಗಾಣಿಗ ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಶಿಕ್ಷಕರಾದ ವಸಂತರಾಜ್ ಶೆಟ್ಟಿ ಮತ್ತು ಗಣೇಶ ದೇವಾಡಿಗ ಅಡಿಕೆಕೊಡ್ಲು ಕಾರ್ಯಕ್ರಮ ನಿರ್ವಹಿಸಿದರು. ವಾಸು ಜಿ.ನಾಯ್ಕ್ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)