ಸೆ.15 ರಿಂದ 21 ರವರೆಗೆ ಜೆಸಿಐ ಉಪ್ಪುಂದ 15ನೇ ಜೇಸಿ ಸಪ್ತಾಹ 2019 ಸಮರ್ಜಿತ್-ಸಾಂಸ್ಕ್ರತಿಕ ಚಿಲುಮೆ

0
162

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಉಪ್ಪುಂದ : ಜೆಸಿಐ ಉಪ್ಪುಂದ 15ನೇ ಜೇಸಿ ಸಪ್ತಾಹ 2019  ಸಮರ್ಜಿತ್-ಸಾಂಸ್ಕ್ರತಿಕ ಚಿಲುಮೆ ಸೆಪ್ಟೆಂಬರ್ 15 ರಿಂದ 21 ರವರೆಗೆ ಸ್ಥಳ ಮಾತೃಶ್ರೀ ಸಭಾಭವನ ಉಪ್ಪುಂದದಲ್ಲಿ ನೆಡೆಯಲಿದೆ.

ಸೆ. 15 ರಂದು ಸಂಜೆ 6.30ಕ್ಕೆ ಜೇಸಿ ಸಪ್ತಾಹ ಉದ್ಘಾಟನೆ ಕಾರ್ಯಕ್ರಮ ಈ ಉದ್ಘಾಟನಾ ಸಮಾರಂಭದಲ್ಲಿ  ಬೈಂದೂರು ಕ್ಷೇತ್ರದ ಶಾಸಕರು ಬಿ.ಎಮ್ ಸುಕುಮಾರ್ ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕರು ವೈ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಡಿ ವೇದವ್ಯಾಸ ಕಾಮತ್ ಈ ಮೂವರು ಜನ ಶಾಸಕರಿಗೆ ಹುಟ್ಟೂರ ಸನ್ಮಾನ ನೆಡೆಯಲಿದೆ. ಹಾಗೂ ಸಂಜೆ 5.00ರಿಂದ ಸ್ಲೋ ಸೈಕಲ್ ಬೈಕ್ ಸ್ಫರ್ಧೆ, ಕರಾಟೆ ಶೋ, ದಂಪತಿ ಸೆಲ್ಪಿ, ಸಂಜೆ 7ರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಮನು ಹಂದಾಡಿ ತಂಡದವರಿಂದ ನಗೆ ಹಬ್ಬ ಕುಂದಗನ್ನಡೋತ್ಸವ ನೆಡೆಯಲಿವೆ.

ಸೆ. 16ರಂದು ರಾತ್ರಿ 7ರಿಂದ ಮನೋರಂಜನಾ ಕಾರ್ಯಕ್ರಮ ಡಾನ್ಸ್ ಧಮಾಕ ಹಾಗೂ ಪ್ರಧಾನಿಗೊಂದು ಪತ್ರ

ಸೆ. 17ರಂದು ಸಂಜೆ 4 ಗಂಟೆ ಮುದ್ದುಕೃಷ್ಣ & ಮುದ್ದು ರಾಧೆ, ಅಮ್ಮನೊಂದಿಗೆ ಸೆಲ್ಪಿ ಹಾಗೂ ರಾತ್ರಿ 7 ಗಂಟೆಗೆ ಅತಿಥಿ ಕಲಾವಿದರಿಂದ ಯಕ್ಷಗಾನ

ಸೆ. 18ರಂದು ಸೆಂಜೆ 5.30ರಿಂದ ರಂಗೋಲಿ ಸ್ಪರ್ಧೆ, ಮುಸಂಬಿ ಹಣ್ಣು ತಿನ್ನುವ ಸ್ಪರ್ಧೆ, ಕಾಯಿ ಸುಲಿಯುವ ಸ್ಪರ್ಧೆ, ರಾತ್ರಿ 7 ಗಂಟೆಗೆ ರಂಗ ಸಂಗಾತಿ ಮಂಗಳೂರು ಇವರು ಅರ್ಪಿಸುವ ನೆಮ್ಮದಿ ಅಪಾರ್ಟಮೆಂಟ್

ಸೆ. 19 ರಂದು ಸಂಜೆ  5 ರಿಂದ ಪುಟಾಣಿಗಳಿಂದ ರಾಜ ರಾಣಿ ಸ್ಪರ್ಧೆ, ತಂದೆಯೊಂದಿಗೆ ಸೆಲ್ಪಿ,  ರಾತ್ರಿ 7ರಿಂದ ಮನೋರಂಜನಾ ಕಾರ್ಯಕ್ರಮ ಹವ್ಯಾಸಿ ಕಲಾವಿದರು ಮಟ್ನಕಟ್ಟೆ ಕೆರ್ಗಾಲು ಇವರಿಂದ ಹಾಸ್ಯಭರಿತ ನಗೆ ನಾಟಕ ಬದ್ಕ್ ಬೆಲ್ಲದ ಕ್ಯಾಂಡಿ

ಸೆ.20ರಂದು 5.30 ರಿಂದ ಮೆಹಂದಿ ಸ್ಪರ್ಧೆ ರಾತ್ರಿ 7 ಗಂಟೆಗೆ ಮನೋರಂಜನಾ ಕಾರ್ಯಕ್ರಮ ಜೇಸಿರೇಟ್ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮ ಹಾಘೂ ಮಕ್ಕಳ ಫ್ಯಾಷನ್ ಶೋ (3ರಿಂದ 8 ವರ್ಷದ ಮಕ್ಕಳವರೆಗೆ)

ಸೆ.21ರಂದು ಸಂಜೆ 5.30ರಿಂದ ಮಕ್ಕಳ ಭಾವ ಚಿತ್ರ ಸ್ಫರ್ಧೆ, 1ರಿಂದ 3 ವರ್ಷ  ಮತ್ತು ಕುಂಚ ಕಾವ್ಯ ರಾತ್ರಿ 7 ಗಂಟೆಗೆ ಮನೋರಂಜನಾ ಕಾರ್ಯಕ್ರಮ ಬಿಜೂರು, ಉಪ್ಪುಂದ, ಸಂದೀಪನ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ

  • ಪ್ರತಿದಿನ ಸಾಧನಶ್ರೀ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ
  • ಪ್ರತಿದಿನ ಅದೃಷ್ಟಶಾಲಿ ವೀಕ್ಷಕರಿಗೆ ಬೆಳ್ಳಿ ನಾಣ್ಯ
  • ಪ್ರತಿದಿನ ಆಕರ್ಷಕ ಬಹುಮಾನಗಳು
  • ಪ್ರತಿದಿನ ವಿಶೇಷ ಸ್ಪರ್ಧೆಗಳು
  • ವರ್ಣರಂಜಿತ ಎಲ್.ಇ.ಡಿ ಪರದೆ
  • ಜಾಹೀರಾತುದಾರರಿಗೆ ವಿಶೇಷ ಪ್ರೋತ್ಸಾಹ

ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)