ಸರಕಾರಿ ಪ್ರೌಡಶಾಲೆ ಉಪ್ಪಿನಕುದ್ರ ಹಳೆ ವಿದ್ಯಾರ್ಥಿ ಸಂಘ ಇದರ 2ನೇ ವರ್ಷದ ವಾರ್ಷಿಕೋತ್ಸವ, ಅಭಿನಂದನೆ ಮತ್ತು ಶಾಲೆಗೆ ಕ್ರೀಡಾ ಸಾಮಾಗ್ರಿ ವಿತರಣಾ ಸಮಾರಂಭ

0
44

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಹಳೆ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಡಶಾಲೆ ಉಪ್ಪಿನಕುದ್ರ ಇದರ 2ನೇ ವರ್ಷದ ವಾರ್ಷಿಕೋತ್ಸವ, ಅಭಿನಂದನೆ ಮತ್ತು ಶಾಲೆಗೆ ಕ್ರೀಡಾ ಸಾಮಾಗ್ರಿ ವಿತರಣಾ ಸಮಾರಂಭವು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವರವರು ಉದ್ಘಾಟಿಸಿದರೆ ಸಭೆಯಲ್ಲಿ 2018ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಧನಲಕ್ಷ್ಮೀ, ದಿವ್ಯಶ್ರೀ ಮತ್ತು ಶ್ರೀಲಕ್ಷ್ಮೀ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು. ಅಲ್ಲದೇ 1999-2000ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ 10000 (ಹತ್ತು ಸಾವಿರ) ರೂಪಾಯಿಯನ್ನು ಶಾಲೆಯ ಕ್ರೀಡಾ ಸಾಮಾಗ್ರಿಯನ್ನು ದೈಹಿಕ ಶಿಕ್ಷಕರಾದ ಮಂಜುನಾಥ ನಾಯಕ್ ಇವರಿಗೆ ಹಸ್ತಾಂತರಿಸಲಾಯಿತು.

ಸಭೆಗೆ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಶೇರಿಗಾರ್, ಉದಯಕುಮಾರ್ ತಲ್ಲೂರು, ಶ್ರೀ ಬೊಬ್ಬರ್ಯ ದೇವಸ್ಥಾನ ಟ್ರಸ್ಟ್(ರಿ) ಉಪ್ಪಿನಕುದ್ರು ಇದರ ಅಧ್ಯಕ್ಷ ರಾಧಾಕೃಷ್ಣ ಶೇರಿಗಾರ್, ಯುವಕ ಮಂಡಲ ಉಪ್ಪಿನಕುದ್ರ ಇದರ ಅಧ್ಯಕ್ಷರಾದ ಗಣೇಶ್ ಶೇರಿಗಾರ್, ಉದ್ಯಮಿ ಗಿರೀಶ್ ನಾಯಕ್, ಗಾಯತ್ರಿ ಕ್ಯಾಂಟಿನ್ ಮಾಲಿಕರಾದ ಮಂಜುನಾಥ ಮಯ್ಯ, ಶಾಲಾ ಮುಖ್ಯೋಪದ್ಯಾಯಿನಿ ಮಾಲತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಕುದ್ರು ಇದರ ಎಸ್.ಡಿ.ಎಮ್.ಸಿ ಅಧ್ಯಕ್ಷ ಅವನೀಶ್ ಹೊಳ್ಳ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದ್ರ ಕುಂದರ್, ಪ್ರೌಡ ಶಾಲೆ ಎಸ್.ಡಿ.ಎಮ್.ಸಿ ಸದಸ್ಯರಾದ ಭಾಸ್ಕರ್, ಶಾಂತಾ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಭೆಗೆ ಆಗಮಿಸಿದ ಅತಿಥಿಗಳನ್ನು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವಿ ದೇವಾಡಿಗ ಸ್ವಾಗತಿಸಿ, ವಾರ್ಷಿಕ ವರಿದಿಯನ್ನು ಜೊತೆ ಕಾರ್ಯದರ್ಶಿ ಶ್ರೀಧರ್ ಆಚಾರ್ಯ ವರದಿ ಮಂಡಿಸಿದರು, ಕಾರ್ಯಕ್ರಮವನ್ನು ಕೋಶಾಧಿಕಾರಿ ರಾಜೇಂದ್ರ ಪೈ ನಿರೂಪಿಸಿ, ಸಾಂಸ್ಕøತಿಕ ಕಾರ್ಯದರ್ಶಿ ಅರುಣ ವಂದಿಸಿದರು. ಸುಕೇಶ್ ಗಿರೀಶ್ ಮೋಗವೀರ ಸಹಕರಿಸಿದರು.

ಹಳೆ ವಿದ್ಯಾರ್ಥಿಗಳಾದ ಮಂಜುನಾಥ ಶಾಸ್ತ್ರೀ, ಅಂಬಿಕಾ ಮನೋಜ್ ಇವರು ಸಾಕಷ್ಟು ದೇಣಿಗೆ ನೀಡಿ ಸಹಕರಿಸಿದರೆ, ಅಲ್ಲದೆ 2010-11ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ರೂಪಾಯಿ6500ಕ್ಕೂ ಹೆಚ್ಚು ಹಣವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲು ಗೌರವ ಶಿಕ್ಷಕಿಯನ್ನು ಆಯ್ಕೆಮಾಡಲಾಯಿತು. ಅನೇಕ ಹಳೆ ವಿದ್ಯಾರ್ಥಿಗಳು ದೇಣಿಗೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ನಾಗರಾಜ ಮಯ್ಯ ಮತ್ತು ಕಾರ್ತಿಕ ಮಯ್ಯರವರು ವಿದ್ಯಾರ್ಥಿಗಳಿಗೆ ಉಪಹಾರ ವ್ಯವಸ್ಥೆ ನೀಡಿ ಸಹಕರಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)