ಜೀವ ವೈವಿದ್ಯ ಹಾಗೂ ವೃಕ್ಷ ಸಂತತಿಯ ಉಳಿವು ಅನಿವಾರ್ಯ

0
89

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)


ಉಪ್ಪುಂದ : ಲಯನ್ಸ್ ಕ್ಲಬ್ ಬೈಂದೂರು ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜು ಕಂಬದಕೋಣೆ ಹಾಗೂ ವಲಯ ಅರಣ್ಯಾಧಿಕಾರಿಗಳ ಕಚೇರಿ ಬೈಂದೂರು ಜಂಟಿ ಆಶ್ರಯದಲ್ಲಿ ವನಮಹೋತ್ಸವ ಹಾಗೂ ಸಸ್ಯಸಂರಕ್ಷಣೆ ಮಾಹಿತಿ ಶಿಬಿರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಮ ವ್ಯಕ್ತಿ ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಬಾಕರ ಕುಲಾಲರವರು ಜೀವ ವೈವಿಧ್ಯತೆಯ ಅರಿವು ವೃಕ್ಷಸಂತತಿಯ ಉಳಿವು ಹಾಗೂ ಅಹಾರ ಸರಪಳಿಯ ಕುರಿತು ಸಮಗ್ರ ಮಾಹಿತಿ ನೀಡದರು. ಆಲ ಪ್ರಳಯದ ನಿಯಂತ್ರಣಕ್ಕೆ ಸಸ್ಯ ಸಂರಕ್ಷಣೆಯೊಂದೆ ಮಾರ್ಗ ಎಂದರು.

ಸಮಾರಂಭದ ಅಧ್ಯಕ್ಷರಾಗಿರುವ ಲ| ಪ್ರಭಾಕರ ಶೆಟ್ಟಿಯವರು ವಿದೇಶದಿಂದ ಆಮದಾಗಿರುವ ಅಕೇಶಿಯ ಗಿಡ ಪರಿಸರಕ್ಕೆ ಮಾರಕವಾಗಿದೆ ಅದರ ಬದಲು ಪರಂಪರಾಗತವಾಗಿರುವ ಸಸ್ಯ ತೋಟಗಳನ್ನು ನಿರ್ಮಿಸಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಸಂಸ್ಥೆಯ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಲ| ಉದಯಕುಮಾರ ಶೆಟ್ಟಿ, ಪ್ರಾಂಶುಪಾಲರು ಗಣಪತಿ ಅವಭ್ರತ ಉಪಪ್ರಾಂಶುಪಾಲ ಉಮೇಶ ಎನ್ ರಾಯಣ್ಕರ್ ಕಾರ್ಯದರ್ಶಿ ಲ| ಸುನೀಲ್ ಜಿ ಪೂಜಾರಿ ಹಾಗೂ ಖಜಾಂಚಿ ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.

ಲ| ದಿವಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)