73 ಸ್ವಾತಂತ್ರೋತ್ಸವ ದಿನದಂದು ಸ್ಪಂದನಾ ವಿಶೇಷ ಶಾಲೆಗೆ ರಕ್ಷಿತ ಕುಮಾರ ಅವರಿಂದ 40ವಿದ್ಯಾರ್ಥೀಗಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ ವಿತರಣಾ ಕಾರ್ಯಕ್ರಮ

0
125

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನಮ್ಮ ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಘಟನೆ ಸದಸ್ಯ ರಕ್ಷಿತ ಕುಮರ ವಂಡ್ಸೆ ಅವರು ಉಡುಪಿ ತೆಂಕನಿಡಿಯೂರು ಕಾಲೇಜಿನ ಎಮ್.ಎಸ್.ಡಬ್ಲೂ ಸ್ನಾತಕೋತ್ರರ ಪದವಿದರರಾಗಿರುತ್ತಾರೆ. ಅವರು ಕಳೆದ ವರ್ಷ ಚೆನೈನಲ್ಲಿ ಸಂಭವಿಸಿದ ಚಂಡಮಾರುತದ ಸಂಧರ್ಭ ಸ್ವಚ್ಚ ಭಾರತ ಫ್ರೆಂಡ್ಸ್ ತಮಿಳುನಾಡಿಗೆ ಪ್ರಯಾಣ ಬೆಳೆಸಿ ಅಲ್ಲಿನ ನಾಗರಿಕರಿಗೆ ನೆರವಾಗಿದ್ದರು . ಸಾಮಾಜಿಕ ಜಾಲತಾಣದಲ್ಲಿ ಸ್ಚಚ್ಚತೆ ಅರಿವು ಸಹಿತ ಅನೇಕ ಸಮಾಜಮುಖಿ ಕಾರ್ಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಸ್ಪಂದನಾ ಪುನರ್ವಸತಿ ಕೇಂದ್ರದಲ್ಲಿ ಕಾರ್ಗಿಲ್ ವಿಜಯದ 20 ನೇ ವಷಾರ್ಚರಣೆಯ ಸಂಧರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಸಿಹಿತಿಂಡಿ ಮತ್ತು ಹಣ್ಣು ವಿತರಿಸುವ ಕಾರ್ಯಕ್ರಮದಲ್ಲಿ ನಮ್ಮ ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಘಟನೆ ಜೊತೆ ಕೈ ಜೋಡಿಸಿದರು.
ಇತ್ತೀಚೆಗೆ ನಡೆದ ನೆರೆಪೀಡಿತ ಪ್ರದೇಶಗಳಿಗೆ ಉತ್ರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಬಡಾಳ ಪಂಚಾಯತ್ ವ್ಯಾಪ್ತಿಯ ನೆರೆ ಫೀಡಿತ ಪ್ರದೇಶ ಮತ್ತು ರಾಜ್ಯದಲ್ಲಿ ಸಂಭವಿಸಿದ ಭೀಕರ ನೆರೆಯಿಂದ ಅಪರ ಪ್ರಮಣದಲ್ಲಿ ಹಾನಿಗೊಳಗಾದ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊನ್ನರು , ಕುರ್ಲಗೆರಿ ಲಕ್ಮಾಪುರ ಪ್ರದೇಶಗಳಿಗೆ ತಲುಪಿ ಪರಿಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. 73 ಸ್ವಾತಂತ್ರೋತ್ಸವ ದಿನದಂದು ಸ್ಪಂದನಾ ವಿಶೇಷ ಶಾಲೆಗೆ ರಕ್ಷಿತ ಕುಮಾರ ಅವರಿಂದ 40 ವಿದ್ಯಾರ್ಥೀಗಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ ವಿತರಣಾ ಕಾರ್ಯಕ್ರಮವು ಸ್ಪಂದನಾ ವಿಶೇಷ ಶಾಲೆ ಸಾಲ್ಮರ ಉಪ್ಪೂರಿನಲ್ಲಿ ನಡೆಯಿತು. ಮಣಿಪಾಲ ಆರೋಗ್ಯ ಕಾರ್ಡ ಪ್ರತಿನಿಧಿ ರಕ್ಷಿತ ಕುಮರ ವಂಡ್ಸೆ ಇವರು ಎಲ್ಲರಿಗೂ ಸ್ವಾತಂತ್ರೋತ್ಸವ ಶುಭಾಶಯ ಹೇಳುತ್ತಾ ಸ್ವಂದನಾ ಪುನರ್ವಸತಿ ಕೇಂದ್ರ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಸಮಾಜದಲ್ಲಿರುವ ಅಸಹಾಯಕರನ್ನು ಗುರುತಿಸಿ ಅವರ ರಕ್ಷಣೆಯನ್ನು ಮಾಡುವುದು ಪೂಣ್ಯದ ಕೆಲಸ ಎಂದರು. ಇದೇ ರೀತಿಯಲ್ಲಿ ಹೆಚ್ಚಿನವರು ಸಹಾಯ ಮಾಡಿದರೆ ಈ ಪುನರ್ವಸತಿ ಕೇಂದ್ರಕ್ಕೆ ತುಂಬಾ ಸಹಾಯವಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಭ ಅಂಬ¯ಪಾಡಿ ಅದ್ಯಕ್ಷ ದುರ್ಗಾಪ್ರಸಾದ , ರೋಟರಿ ಕಾರ್ಯದರ್ಶಿ ಮಹೇಂದ್ರ ಕುಮಾರ , ಮಾಜಿ ಅಧ್ಯಕ್ಷ ಜಯಪ್ರಕಾಶ ಕೆದ್ಲಾಯ , ಶ್ರೀ ಖಲೀಲ ಅಹಮ್ಮದ್ , ಶ್ರೀ ಅಶೋಕ ಶೆಟ್ಟಿ , ರೋಟರಿ ಕ್ಲಭನವರು ಶಾಲೆ ಮಕ್ಕಳಿಗೆ ಅಕ್ಕಿ ಮತ್ತು ಸಿಹಿ ತಿಂಡಿ ವಿತರಿಸಿದರು . ಸ್ಪಂದನಾ ಬಳಗದವರು ಮಕ್ಕಳಿಗೆ ಆಟ ಆಡಿಸಿ ಸಿಹಿ ತಿಂಡಿ ವಿತರಿಸಿದರು . ಬೇರೆ ಸಂಘ ಸಂಸ್ಥೆಯವರು ಈ ಸಂಸ್ಥೆಗೆ 73 ನೇ ಸ್ವಾತಂತ್ರೋತ್ಸವಕ್ಕೆ ಸಹಕರಿಸಿದರು. ಸ್ಪಂದನಾ ಸಂಸ್ಥೆಯ ಅಧ್ಯಕ್ಷ ಮಹೇಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)