ಅಖಂಡ ಭಾರತದ ಸಾರ್ವಬೌಮ ಕಲ್ಪನಯೇ 73ನೇ ಸ್ವಾತಂತ್ರ್ಯದ ವೈಭವ

0
91

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೂರು ಕನ್ನಡ ಜಂಟಿ ಆಶ್ರಯದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೂರಿನಲ್ಲಿ ಅದ್ದೂರಿಯಾಗಿ ಜರುಗಿತು.

ಅಖಂಡ ಭಾರತದ ಸಾರ್ವಬೌಮ ಕಲ್ಪನಯೇ 73ನೇ ಸಾತಂತ್ರ್ಯದ ವೈಭವ ಈ ಸಂಭ್ರಮದಲ್ಲಿ ಯುವ ಜನತೆ ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕೆಂದು ಕುಸುಮಾ ಪೌಂಡೇಶನ್ ಪ್ರವರ್ತಕ ನಳಿನಕುಮಾರ ಶೆಟ್ಟಿ ಕರೆನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಬೈಂದುರು ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಪ್ರಭಾಕರ ಶೆಟ್ಟಿಯವರು “ಹಿರಿಯರು ಪಡೆದ ಸಾತಂತ್ರ್ಯವನ್ನು ಉಳಿಸಿಕೊಂಡು ಭ್ರಷ್ಠಚಾರ ಮುಕ್ತ ಭ್ರಾತೃತ್ವಭಾವದ, ಸರ್ವದರ್ಮ ಸಮನ್ವಯತೆಯ ನೂತನ ರಾಷ್ಟ್ರದ ರಾಯಭಾರಿಗಳು ನಾವಾಗಬೇಂಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಯೋಧರು ಕಂಬದಕೋಣೆ ಗ್ರಾಮದ ಲೆಕ್ಕಿಗರಾಗಿರುವ ಶಿವಾನಂದ ಹಳ್ಳೂರು ಇವರನ್ನು ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಈಶ್ವರ ದೇವಾಡಿಗ ಎಸ್‍ಡಿಎಮ್‍ಸಿ ಅಧ್ಯಕ್ಷೆ ಸುಜಾತ, ಮುಖ್ಯ ಶಿಕ್ಷಕಿ ಮರ್ಲಿ ಮೊಗವೀರ, ಕಾರ್ಯದರ್ಶಿ, ಲ|ಸುನೀಲ್ ಜಿ ಪೂಜಾರಿ, ಖಜಾಂಚಿ ಮಂಜುನಾಥ ದೇವಾಡಿಗ, ದಿವಾಕರ ಶೆಟ್ಟಿ, ರವಿರಾಜ ಹೆಗ್ಡೆ ಚಂದ್ರ ಹಳಗೇರಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶೋಭಾ ಶಿವರಾಮ್ ಆಚಾರ್ ನಿರ್ವಹಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)