ಉತ್ತರ ಕನ್ನಡ ಜಿಲ್ಲೆಗೆ ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿದ ಸ್ವಚ್ಚ ಭಾರತ ಪ್ರೇಂಡ್ಸ್ ಉಡುಪಿ ಮತ್ತು ಜೆ.ಸಿ.ಐ. ಉಡುಪಿ ಸಿಟಿ ತಂಡ

0
68

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಡಾಳ ಪಂಚಾಯತ್ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಸ್ವಚ್ಚ ಭಾರತ ಪ್ರೇಂಡ್ಸ್ ಉಡುಪಿ ಮತ್ತು ಜೆ.ಸಿ.ಐ. ಉಡುಪಿ ಸಿಟಿ ತಂಡ ಭಾನುವಾರ ಮಧ್ಯಾಹ್ನ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ವಚ್ಚ ಭಾರತ ಪ್ರೇಂಡ್ಸ್ ಉಡುಪಿ ಮತ್ತು ಜೆ.ಸಿ.ಐ. ಉಡುಪಿ ಸಿಟಿ ತಂಡದ ವತಿಯಿಂದ ಪರಿಹಾರ ಸಾಮಗ್ರಿಗಳನ್ನು ವಿತರಣೆ ಮಾಡಿ ಕುಟುಂಬಗಳಿಗೆ ಸಾಂತ್ವನ ಹೇಳಲಾಯಿತು.

ಇಲ್ಲಿ ಹರಿಯುವ ಅಘನಾಶಿನಿ ನದಿಯ ಅಪಾಯದ ಮಟ್ಟವನ್ನು ಮೀರಿ ಹರಿದ ಪರಿಣಾಮ ಈÀ ಪ್ರದೇಶದಲ್ಲಿ ತೂಗು ಸೇತುವೆಯನ್ನು ನಂಬಿಕೊಂಡು ಜೀವನವನ್ನು ನಡೆಸುತ್ತಿದ್ದ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳು ಸೇತುವೆಯು ಮುರಿದು ಬಿದ್ದ ಪರಿಣಾಮವಾಗಿ ಸಂಪರ್ಕವನ್ನು ಕಡಿದುಕೊಂಡು ಅತಂತ್ರದ ಸ್ಥಿತಿಯಲ್ಲಿ ಇವೆ. ಆ ಪ್ರದೇಶವನ್ನು ಗುರಿಯಾಗಿಸಿ ಸ್ವಚ್ಚ ಭಾರತ ಪ್ರೇಂಡ್ಸ್ ಉಡುಪಿ ಮತ್ತು ಜೆ.ಸಿ.ಐ. ಉಡುಪಿ ಸಿಟಿ ತಂಡ ತಂಡ ಸಹಾಯವನ್ನು ಮಾಡಿತು. ಅಲ್ಲಿನ ಸಮಾಜ ಕಲ್ಯಾಣ ಅಧಿಕಾರಿಯವರು ಹೇಳುವ ಪ್ರಕಾರ ಅಲ್ಲಿಗೆ ನೀಡಿದ ಮೊದಲ ತಂಡ ನಮ್ಮದು ಎಂದು ತಿಳಿದು ಖುಷಿ ಆದರೂ ಅಲ್ಲಿನ ಪರಿಸ್ಥಿತಿ ನೋಡಿ ಅದು ಕ್ಷಣಿಕವಾಯಿತು.

ಎಲ್ಲರಿಗೂ ತಿಳಿದಂತೆ ಕರುನಾಡಿನಲ್ಲಿ ಕಳೆದ ಒಂದು ವಾರದಲ್ಲಿ ಧಾರಕಾರವಾಗಿ ಮಳೆ ಬೀಳುತ್ತಿದ್ದು . ಉತ್ತರ ಕನ್ನಡ ರಾಜ್ಯದ ಹಲವು ಜಿಲ್ಲೆಯಲ್ಲಿ ತಿಳಿದಿರುವಂತ ವಿಷಯ.

ಅಂದ ಹಾಗೆ ವೀಪರೀತ ಮಳೆಯಿಂದ ಪ್ರವಾಹ ಉಂಟಾಗುತ್ತಿದ್ದು ಅನೇಕ ಹಾನಿಯಾಗಿದ್ದು ಅದರಲ್ಲೂ ಕಾರವಾರ ಕೂಡ ಒಂದು. ಈ ಜಿಲ್ಲೆಯಲ್ಲಿ ಒಟ್ಟು 5 ನದಿಗಳು ಉಕ್ಕಿ ಹರಿದಿದೆ. ಭಾರಿ ಪ್ರಮಾಣದ ನೀರು ಬಂದಿದ್ದು ನದಿಯ ಅಕ್ಕಪಕ್ಕದಲ್ಲಿ ವಾಸಿಸುವ ಮನೆಗಳಿಗೆ ತೋಟ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿ ಪರಿಸ್ಥಿತಿ ಬಿಗಡಾಯಿಸಿದೆ.

“ನನ್ನ ಊರಾದ ಕುಮಟಾ ತಾಲೂಕಿನ ಸೊಪ್ಪಿನ ಹೊಸಹಳ್ಳಿ ( ಬಡಾಳ ) ಗ್ರಾಮವು ಕೂಡಾ ಪ್ರವಾಹ ಎದುರಿಸಿದ ಗ್ರಾಮವಾಗಿದೆ. ಊರಿನ ಪಕ್ಕದಲ್ಲಿ ಅಘನಾಶಿನಿ ನದಿಯ ಕುಂಭದ್ರೋಣ ಮಳೆಗೆ ಉಕ್ಕಿ ಹರಿದು ಅಕ್ಕಪಕ್ಕದ ಊರಿಗೆ ನೀರು ತುಂಬಿ ಜಲದಿಗ್ಬಂದನ ಉಂಟಾಗುವ ಹಾಗೆ ಮಾಡಿದೆ. ಈ ಸಂಧರ್ಭದಲ್ಲಿ ನನ್ನ ಮನೆಗೂ ನೀರು ನುಗ್ಗಿದ್ದು ಯಾವುದೇ ಹಾನಿ ದೇವರ ಕೃಪೆಯಿಂದ ಆಗಲಿಲ್ಲ.. ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸರಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಕಾಲೇಜಿನಲ್ಲಿ ಪಡೆದ ನಾನು ನನ್ನ ಸ್ನೇಹಿತ ಪವನ ಕುಮಾರ ಎನಾದರು ಹಾನಿಗೆ ಒಳಗಾದ ಜನರಿಗೆÀ ಸಹಾಯ ಮಾಡಬೇಕೆಂಬ ಹಂಬಲ. ಇದೇ ಸಂದರ್ಭದಲ್ಲಿ ನನಗೆ ಆಪತ್ಬಾಂದವರಾಗಿ ಬಂದಿದ್ದು ನನ್ನ ನೆಚ್ಚಿನ ಗುರುಗಳಾದ ಗಣೇಶ ಪ್ರಸಾದ ಸರ್. (ಉಪಾನ್ಯಾಸಕರು). ಹಾಗೂ ಅವರ ತಂಡ. . ಉತ್ತರ ಕನ್ನಡ ಕುಮಟಾ ತಾಲೂಕಿಗೆ ನಾವು ಸ್ವಚ್ಚ ಭಾರತ ಪ್ರೆಂಡ್ಸ್ ಉಡುಪಿ ಮತ್ತು ಜೆ.ಸಿ.ಐ. ಉಡುಪಿ ಸಿಟಿ. ಮೂಲಕ ನಾವು ಪರಿಹಾರ ಸಾಮಗ್ರಿಗಳನ್ನು ನೀಡುತ್ತೇವೆ. ಸ್ಥಳೀಯವಾಗಿ ನಾನು ಇದ್ದುದರೀದ ನಮ್ಮ ಜೊತೆ ಕೈ ಜೋಡಿಸಿ ಎಂದು ದೂರವಾಣಿ ಕರೆ ಮೂಲಕ ತಿಳಿಸಿದರು. ಈ ಸಂದರ್ಭ ಬೇರೆ ಕೆಲವು ಪ್ರವಾಹ ಪೀಡಿತ ಊರುಗಳು ನೆನಪಾಯಿತು. ಆದರೆ ಆ ಎಲ್ಲಾ ಊರಿಗೂ ಪರಿಹಾರದ ಮಹಾಪೂರವೇ ಬಂದಿದೆ. ಎಂಬ ವಿಷಯ ತಿಳಿಯಿತು. ಹಾಗಾಗಿ ನಮ್ಮ ಗ್ರಾ. ಪಂ. ಸೊಪ್ಪಿನ ಹೊಸಳ್ಳಿ ಗ್ರಾಮಗಳಿಗೆ ಯಾರು ಸಾಮಾಗ್ರಿಗಳನ್ನು ನೀಡಿಲ್ಲವಾಗಿತ್ತು. ಕಾರಣ ಕುಮಟಾದಿಂದ 30 ಕಿ.ಮೀ. ದೂರದ ಗ್ರಾಮ. ಹಾಗಾಗಿ ನನ್ನ ಊರನ್ನೇ ಸೂಚಿಸಿದೆ. ಇದಕ್ಕೆ ಒಪ್ಪಿಗೆ ಸೂಚಿಸಿ ಇದೇ ಸೂಕ್ತ ಗ್ರಾಮ ಎಂದು ತಿಳಿಸಿದರು. ಪ್ರಥಮವಾಗಿ ಪರಿಹಾರ ನೀಡಿದವರ ಹೆಸರಿನಲ್ಲಿ ಸ್ವಚ್ಚ ಭಾರತ ಪ್ರೇಂಡ್ಸ್ ಉಡುಪಿ ಮತ್ತು ಜೆ.ಸಿ.ಐ. ಉಡುಪಿ ಸಿಟಿ ತಂಡ ಭಾಜನರಾದರು.” – ಮಾರುತಿ ಸ್ಥಳೀಯ ನಿವಾಸಿ .

ಹಾಗೆಯೇ ಪ್ರಾಜ್ಞರು (ಹಿರಿಯರು) ಹೇಳಿರುವ ಹಾಗೆ ಈ ರೀತಿ ಹಿಂದೆಂದು ನಾವು ಕಂಡಿಲ್ಲ. ಆದರೆ ಈ ರೀತಿ 1982 ಇಸವಿ ಪ್ರವಾಹ ಬಂದಿರುವುದಾಗಿ ನೆನಪಿಸಿಕೊಂಡರು. ಈ ಪ್ರವಾಹವು ಎಷ್ಟರ ಮಟ್ಟಿಗೆ ಇತ್ತು ಎಂದರೆ ಅಘನಾಶಿನಿ ನದಿಗೆ ಅಡ್ಡವಾಗಿ ಹಾಕಿದ ತೂಗು ಸೇತುವೆಯನ್ನು ಮುರಿದು ನಾಶ ಮಾಡಿತು. ಈ ಸೇತುವೆ ಮೊರ್ಸೆ , ಬಂಗಣೆ , ಉಪ್ಪೆ ಗ್ರಾಮವನ್ನು ಗ್ರಾಮ ಪಂಚಾಯತ್ ಆದ ಸೊಪ್ಪಿನ ಹೊಸಹಳ್ಳಿ (ಬಡಾಳ ) ಮತ್ತು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ತೂಗು ಸೇತುವೆ ಆಗಿತ್ತು. ಪ್ರಸ್ತುತ 3 ಗ್ರಾಮದಲ್ಲಿ 200 ಕ್ಕೂ ಹೆಚ್ಚು ಕುಟುಂಬ ವಾಸಿಸುತ್ತಿದ್ದು ಇಲ್ಲಿ ವಾಸವಿರುವ ಸುಮಾರು 600 ಜನರಿಗೆ ಯಾವುದೇ ಸಂಪರ್ಕ ಇಲ್ಲದ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಅಲ್ಲದೇ 2 ಮನೆಗಳು ಪ್ರವಾಹದಿಂದ ಬಿದ್ದು ನೆಲಸಮವಾಗಿದೆ. ಕಳೆದು 8 ದಿನಗಳಿಂದ ವಿದುತ ಸಂಪರ್ಕ ಸ್ಥಗಿತಗೊಂಡಿದೆ. ಇವರು ಈ ನಗರವನ್ನು ಸಂಪರ್ಕಿಸಲು ಕಾಲ್ನಡಿಗೆಯಲ್ಲಿ 10-15 ಕಿ.ಮೀ ಬರಬೇಕು. ಅನಾರೋಗ್ಯ ಪೀಡಿತರಿಗೆ ವೈಧ್ಯರ ಬಳಿಗೆ ಹೋಗಲಿಕ್ಕೆ ನಡೆದುಕೊಂಡು ಹೋಗಲು ಅಸಾಧ್ಯವಾಗುತ್ತದೆ.

ಸುಮಾರು 40 ,000 ಕ್ಕೂ ಅಧಿಕ ಮೌಲ್ಯದ ಅಕ್ಕಿ , ಬೇಳೆ, ಸಾಂಬಾರು ಪದಾರ್ಥ ,ಸೋಪ್, ಮೇಣದ ಬತ್ತಿ , ಹಾಸಿಗೆ , ಬಟ್ಟೆ , ರಸ್ಕ್ , ಬಟ್ಟೆ , ಬಿಸ್ಕತ್, ಹೊದಿಕೆಯನ್ನು 24 ಘಂಟೆಯಲ್ಲಿ ಕ್ರೋಡಿಕರಿಸಿ ನಮ್ಮ ಊರಿಗೆ ಸ್ವತಃ ಅವರ ತಂಡವೇ ದಿನಾಂಕ 11-8-2019 ರಂದು ತಂದು ಗ್ರಾ.ಪಂ . ಸೊಪ್ಪಿನ ಹೊಸಳ್ಳಿ ( ಬಡಾಳ) ಕ್ಕೆ ಒಪ್ಪಿಸಿದರು. ಸಾಂಕೇತಿಕವಾಗಿ ಒಂದು ಮನೆಬಿದ್ದ ಸ್ಥಳಕ್ಕೆ ಹೋಗಿ ಬೇಟೆ ನೀಡಿ ಸಾಂತ್ವನ ಹೇಳಿ ಪಲಾನುಭವಿಗಳಿಗೆ ಅಗತ್ಯ ಸಾಮಾನು , ಔಷಧ , ಹಾಸಿಗೆ ನೀಡಿದರು. ಈ ಸಂದರ್ಭದಲ್ಲಿ ಗಣೇಶ ಪ್ರಸಾದ ನಾಯಕ್, ರಾಘವೇಂದ್ರ ಪ್ರಭು , ರಕ್ಷಿತ್ ಕುಮಾರ ವಂಡ್ಸೆ , ಉದಯ ನಾಯ್ಕ್ . ವಿವೇಕ್ , ಜಗದೀಶ್ . ಬಡಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಜುನಾಥ ನಾಯ್ಕ್ , ಶಿವು ಗೌಡ, ಎಸ್.ವಿ. ಹೆಗಡೆ , ಮೋಹನ ಬಡಾಳ , ಮಹೇಶ ಬಡಾಳ , ಅಜೀಜ್ ಸಾಬ್, ಪವನ ಕುಮಾರ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಚಿತ್ರ ಮತ್ತು ವರದಿ : ರಕ್ಷಿತ ಕುಮಾರ ವಂಡ್ಸೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)