ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಪದಪ್ರದಾನ

0
107

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಉಪ್ಪುಂದ : ಲಯನ್ಸ್ ಕ್ಲಬ್ ಪ್ರೀತಿ, ವಿಶ್ವಾಸದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸದಸ್ಯರಲ್ಲಿ ನಾಯಕತ್ವ ಗುಣ ಬೆಳೆಸುವುದರೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತದೆ ಎಂದು ಪ್ರಥಮ ಉಪ ಜಿಲ್ಲಾ ಗರ್ವನರ್ ಎನ್.ಎಮ್.ಹೆಗ್ಡೆ ಹೇಳಿದರು.

ಅವರು ಜು. 30ರಂದು ದೇವಕಿ. ಬಿ. ಆರ್. ಸಭಾಂಗಣ ನಂದನವನ ಉಪ್ಪುಂದದಲ್ಲಿ ನಡೆದ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಬೈಂದೂರು-ಉಪ್ಪುಂದ ಕ್ಲಬ್‍ನ ಅಧ್ಯಕ್ಷರ ಕಾರ್ಯಕ್ಷಮತೆಯಿಂದಾಗಿ ಚಾಂಪಿಯನ ಆಗುವ ಮೂಲಕ ಅಂತಾರಾಷ್ರ್ಟೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರು.

ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಯು. ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ ನಿರಂತರ ಪ್ರಯತ್ನ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಣೆಯ ಫಲವಾಗಿ ಕ್ಲಬ್ ಉನ್ನತ ಸ್ಥಾನಕ್ಕೆ ತಲುಪಿಸುವುದು ಬಹಳ ಸಂತಸ ತಂದಿದೆ. ಎಲ್ಲರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಉಪ ಜಿಲ್ಲಾ ಗರ್ವನರ್ ವಿಶ್ವನಾಥ ಶೆಟ್ಟಿ, ಲಯನ್ ಪ್ರಾಂತೀಯ ಅಧ್ಯಕ್ಷ ದಿನಕರ ಶೆಟ್ಟಿ, ವಲಯಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಮಂಜುನಾಥ ದೇವಾಡಿಗ, ನಿಕಟಪೂರ್ವ ಕಾರ್ಯದರ್ಶಿ ಗಿರೀಶ ಶಾನುಭಾಗ್, ನಿಕಟಪೂರ್ವ ಕೋಶಾಧಿಕಾರಿ ಸುರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನೂತನ ಸದಸ್ಯರಾಗಿ ಕೃಷ್ಣಮೂರ್ತಿ, ಮೋಹನ, ಹರೀಶ ಶೇಟ್, ಸತೀಶ ಶೇಟ್ ಸೇರ್ಪಡೆಗೊಂಡರು. ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುರೇಶ ಪೂಜಾರಿ ಅವರ ಕುಟುಂಬದವರಿಗೆ ಹಾಗೂ ಹಳಗೇರಿ ಅಂಗನವಾಡಿ ಕೇಂದ್ರಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು. ಹಳಗೇರಿ ಮೂಕಾಂಬು ದೇವಾಡಿಗ ಇವರಿಗೆ ಹೊಲಿಗೆ ಯಂತ್ರ ನೀಡಲಾಯಿತು.

ಸತೀಶ ಶೆಟ್ಟಿ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಕೋ-ಆಡಿರ್ನೇಟರ್ ಉಪ್ಪುಂದ ವೆಂಕಟೇಶ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುನೀಲ್.ಜಿ. ಪೂಜಾರಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)