ವ್ಯಸನ ಮುಕ್ತ ಸಮಾಜ ನಿರ್ಮಿಸಿ : ಡಾ. ರಘು ನಾಯ್ಕ್, ಜೆಸಿಐ ಬೈಂದೂರು ಸಿಟಿ ಇದರ ಜೆಸಿರೇಟ್ ವತಿಯಿಂದ ವ್ಯಸನ ಮುಕ್ತ ದಿನಾಚರಣೆ

0
181

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೆಸಿಐ ಬೈಂದೂರು ಸಿಟಿ ಇದರ ಜೆಸಿರೇಟ್ ವತಿಯಿಂದ ವ್ಯಸನ ಮುಕ್ತ ದಿನಾಚರಣೆಯನ್ನು ಹೆಚ್.ಎಂ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆ ಬೈಂದೂರಿನಲ್ಲಿ ಆಚರಿಸಲಾಯಿತು.

ಬೈಂದೂರು ಸ.ಪ್ರ.ದರ್ಜೆ ಕಾಲೇಜಿನ ಉಪನ್ಯಾಸಕ ರಘು ನಾಯ್ಕ ಮಾತನಾಡಿ ಸಧೃಢ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು. ಆದರೆ ಶಾಲಾ ಕಾಲೇಜು ಹಂತದಲ್ಲಿಯೇ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ದುದೈರ್ವದ ಸಂಗತಿ ಎಂದರು.

ಈ ಸಂದರ್ಭದಲ್ಲಿ ರೋಲ್ ಎಂಡ್ ರಿಲೆವೆನ್ಸ್ ಆಪ್ ಕಾರ್ಪೋರೇಟ್ ಇ-ಲರ್ನಿಂಗ್ ಇನ್‍ಹೆನ್ಸಿಂಗ್ ದಿ ಇಫೆಕ್ಟಿವ್‍ನೆಸ್ ಆಪ್ ಟ್ರೈನಿಂಗ್ ಎಂಡ್ ಡೆವಲಪ್‍ಮೆಂಟ್ ಎಸ್ಟಡಿ ವಿದ್ ರೆಫರೆನ್ಸ್ ಟು ಕಂಪ್ಯೂಟರ್ ಸಾಪ್ಟೆವೇರ್ ಎಂಡ್ ಸರ್ವೀಸಸ್ ಫಮ್ರ್ಸ್ ಇನ್ ಕರ್ನಾಟಕ ಮಹಾ ಪ್ರಬಂದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಬೈಂದೂರು ಸ.ಪ್ರ.ದರ್ಜೆ ಕಾಲೇಜಿನ ಉಪನ್ಯಾಸಕ ರಘು ನಾಯ್ಕರವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆ.ಸಿ ಬೈಂದೂರು ಅಧ್ಯಕ್ಷ ಮಣಿಕಂಠ ಎಸ್, ಜೆಸಿರೇಟ್ ಪ್ರಿಯದರ್ಶಿ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)