ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ, ರಕ್ತದಾನದಿಂದ ಉತ್ತಮ ಆರೋಗ್ಯ ಹೊಂದಬಹುದು : ಜಗನ್ನಾಥ ಶೆಟ್ಟಿ

0
124

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಬೈಂದೂರು-ಶಿರೂರು ಘಟಕ ಶ್ರೀ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಉಡುಪಿ ರಕ್ತನಿಧಿ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ, ಜಿಲ್ಲಾಡಳಿತ ಉಡುಪಿ ರೋಟರಿ ಕ್ಲಬ್ ಬೈಂದೂರು ಶ್ರೀ ಮಾರಿಕಾಂಬಾ ಯೂತ್ ಕ್ಲಬ್ (ರಿ.) ಕಳವಾಡಿ (ಹವ್ಯಾಸಿ ಕಲಾತಂಡ) ಜೆಸಿಐ ಉಪ್ಪುಂದ ಹಾಗೂ ಬಂಟರ ಯಾನೆ ನಾಡವರ ಸಂಘ (ರಿ) ಬೈಂದೂರು ಇವರ ಸಹಯೋಗದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಬಂಡಾಡಿ ಜಗನ್ನಾಥ ಶೆಟ್ಟಿ ಸಭಾಭವನ ಕೊಲ್ಲೂರು ರಸ್ತೆ, ಯಡ್ತರೆಯಲ್ಲಿ ನಡೆಯಿತು.

ನಿವೃತ್ತ ಐ.ಎಪ್.ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಚ್ಚು ಮಂದಿ ರಕ್ತದಾನಕ್ಕೆ ಮುಂದಾಗಬೇಕು. ಈ ಮೂಲಕ ರಕ್ತದ ಕೊರತೆ ನಿವಾರಣೆಗೆ ನೆರವಾಗಬೇಕು. ಯುವ ಸಮುದಾಯ ಈ ಕುರಿತು ಹೆಚ್ಚು ಗಮನ ಹರಿಸಬೇಕು ಹಾಗೆ ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆ ಇದ್ದು, ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಆರೋಗ್ಯದ ಮೇಲೆ ಯಾವುದೆ ದುಷ್ಪರಿಣಾಮ ಬೀರುವುದಿಲ್ಲ. ರಕ್ತದಾನದಿಂದ ಉತ್ತಮ ಆರೋಗ್ಯ ಹೊಂದಬಹುದೆಂಬುದರ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಪಟ್ಟರು.

ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆ ಇದ್ದು, ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಆರೋಗ್ಯದ ಮೇಲೆ ಯಾವುದೆ ದುಷ್ಪರಿಣಾಮ ಬೀರುವುದಿಲ್ಲ. ರಕ್ತದಾನದಿಂದ ಉತ್ತಮ ಆರೋಗ್ಯ ಹೊಂದಬಹುದೆಂಬುದರ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್ ಉಪ್ಪುಂದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ವಿನಯ ಕರ್ಕೆರ, ಮೊಗವೀರ ಯುವ ಸಂಘಟನೆಯ ಬೈಂದೂರು- ಶಿರೂರು ಘಟಕದ ಅಧ್ಯಕ್ಷ ವಸಂತ ಬಿ.ತಗ್ಗರ್ಸೆ, ಮೊಗವೀರ ಮುಂದಾಳು ರಾಮ ಮೊಗವೀರ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅದ್ಯಕ್ಷ ಎಸ್ ಜನಾರ್ಧನ ಮರವಂತೆ, ಮಂಜುನಾಥ ಮಹಾಲೆ, ಉಪ್ಪುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಜಗನ್ನಾಥ ಎಂ, ಉಪಾಧ್ಯಕ್ಷ ಕೃಷ್ಣ ಮೊಗವೀರ ಉಪ್ಪುಂದ ಜೆಸಿಐ ಅಧ್ಯಕ್ಷ ಪುರಂದರ ಖಾರ್ವಿ, ಮಾರಿಕಾಂಬಾ ಯೂತ್ ಕ್ಲಬ್ ಅಧ್ಯಕ್ಷ ಸುಬ್ರಮಣ್ಯ ಪೂಜಾರಿ, ವೈದ್ಯಾಧಿಕಾರಿ ಡಾ| ಅಶ್ವಿನ್, ನಾಗರತ್ನ ಶೆಟ್ಟಿ ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)