ಬೈಂದೂರು : ಮಕ್ಕಳ ಯೋಗ ಮತ್ತು ವಿದ್ಯಾರ್ಥಿ ನಾಯಕತ್ವದ ಶಿಬಿರ ಉದ್ಘಾಟನೆ, ಸೇವಾದಳದ ತರಬೇತಿಯಿಂದ ಮಕ್ಕಳಲ್ಲಿ ಶಿಸ್ತು ಮತ್ತು ಗುಣಗಳನ್ನು ಮೈಗೂಡಿಸಲು ಸಹಾಯವಾಗುತ್ತದೆ : ತಿಮ್ಮಪ್ಪ ಶೆಟ್ಟಿ

0
82

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಭಾರತ ಸೇವಾದಳ ಜಿಲ್ಲಾ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ, ಉಡುಪಿ, ಭಾರತ ಸೇವಾದಳ ಬೈಂದೂರು ತಾಲೂಕು, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೈಂದೂರು ವಲಯ ಇವರ ನಿರ್ದೇಶನದಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ (ರಿ) ಉಪ್ಪುಂದ ಬೈಂದೂರು ತಾಲೂಕು ರೋಟರಿ ಕ್ಲಬ್ ಬೈಂದೂರು ಮತ್ತು ಸೇವಾದಳ ಬೈಂದೂರು ತಾಲೂಕು ಮಟ್ಟದ ಮಕ್ಕಳ ಯೋಗ ಮತ್ತು ವಿದ್ಯಾರ್ಥಿ ನಾಯಕತ್ವದ ಶಿಬಿರವು ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪ್ರಕಾಶ್‍ಚಂದ್ರ ಶೆಟ್ಟಿ ಉದ್ಘಾಟಿಸಿದರು.

ಭಾರತ ಸೇವಾದಳದ ತಾಲೂಕು ಸಮಿತಿಯ ಪದಗೃಹಣ ಕಾರ್ಯಕ್ರಮ ನಡೆಯಿತು.

ತಾಲೂಕು ಸಮಿತಿಯ ಅಧ್ಯಕ್ಷರಾಗಿ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ಉಬ್ಬೇರಿ ಆಯ್ಕೆಗೊಂಡಿದ್ದರು. ಸದಸ್ಯರಾಗಿ ಎಸ್ ರಾಜು ಪೂಜಾರಿ, ಪ್ರಿಯದರ್ಶಿನಿ ದೇವಾಡಿಗ, ಜಯಾನಂದ ಹೋಬಳಿದಾರ್, ಜೈಸನ್ ಎಂ.ಡಿ ಮನ್ಸೂರ್ ಇಬ್ರಾಹಿಂ, ಕೃಷ್ಣಪ್ಪ ಶೆಟ್ಟಿ ಕರುಣಾಕರ ಶೆಟ್ಟಿ ಕೆರಾಡಿ ಆಯ್ಕೆಗೊಂಡಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ನಾಯಕರು ಅವರನ್ನು ಸರಿ ಮಾರ್ಗದಲ್ಲಿನಡೆಯುವಂತೆ ಮಾಡುವುದು ನಮ್ಮಲ್ಲರ ಜವಬ್ದಾರಿ ಆದ್ದರಿಂದ ಸೇವಾದಳದ ತರಬೇತಿಯಿಂದ ಮಕ್ಕಳಲ್ಲಿ ಶಿಸ್ತು ಮತ್ತು ಗುಣಗಳನ್ನು ಮೈಗೂಡಿಸಲು ಸಹಾಯವಾಗುತ್ತದೆ ಎಂದರು.

ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಸೆಪ್ಟೆಂಬರ್‍ನಲ್ಲಿ ನಡೆಯುವ ಮಕ್ಕಳ ವೇಳಕ್ಕೆ ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೂರು ತಿಮ್ಮಪ್ಪ ಶೆಟ್ಟಿ, ಶ್ರೀನಿವಾಸ ಉಬ್ಜೇರಿ, ಗೌರಿ ದೇವಾಡಿಗ, ಪ್ರಿಯದರ್ಶಿನಿ ದೇವಾಡಿಗ ಪ್ರಕಾಶ್ ಭಟ್,ಮಧುಕರ ಎಸ್, ಗಣೇಶ ಗಾಣಿಗ ಉಪ್ಪುಂದ ಉಪಸ್ಥಿತರಿದ್ದರು.

ಪ್ರತೀ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಫಕ್ಕೀರ್ ಗೌಡ ಕಾರ್ಯಕ್ರಮ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)