ಚಿತ್ತೂರು : ವಲಯಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ

0
108

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸರಕಾರಿ ಪ್ರೌಢಶಾಲೆ ಚಿತ್ತೂರಿನಲ್ಲಿ 2019-20ನೇ ಸಾಲಿನ ಬೈಂದೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದ ಪೂರ್ವಭಾವಿ ಸಭೆ ಸ್ಥಳೀಯ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಂತೋಷ್ ಮಡಿವಾಳರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿದ ಉದ್ಯಮಿಗಳು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು, ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ಕೃಷ್ಣಮೂರ್ತಿ ಮಂಜರು ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಕ್ರೀಡೆಯೂ ಅತ್ಯಗತ್ಯ. ಅಂತಹ ಕ್ರೀಡಾಕೂಟ ಆಯೋಜಿಸುವ ಸುವರ್ಣಾವಕಾಶ ಈ ಬಾರಿ ನಮ್ಮೂರಿಗೆ ಸಿಕ್ಕಿದೆ, ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಎಸ್.ಡಿ.ಎಮ್.ಸಿ ಸದಸ್ಯರಾದ ರವಿರಾಜ ಶೆಟ್ಟಿ ಮಾತನಾಡಿ ಈ ಶಾಲೆಯಲ್ಲಿ ಹಿಂದಿನ ಯಾವುದೇ ಕಾರ್ಯಾಕ್ರಮದ ಯಶಸ್ಸಿಗೆ ಸ್ಥಳೀಯ ದಾನಿಗಳ ಸಹಕಾರ ತುಂಭಾ ದೊಡ್ಡಮಟ್ಟದಲ್ಲಿತ್ತು, ಅದೇ ರೀತಿ ಈ ಕ್ರೀಡಾಕೂಟದ ಯಶಸ್ಸಿಗೆ ಸಹಾಯ ಸಹಕಾರ ನೀಡುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಬಿ ಮಾತನಾಡಿ, ಈ ಶಾಲೆಗೆ ಊರ ದಾನಿಗಳ ಸಹಾಯ ಸಹಕಾರವನ್ನು ಶ್ಲ್ಯಾಘಿಸುತ್ತಾ, ಶಿಕ್ಷಕರ ಕರ್ತವ್ಯ ಬದ್ಥತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಕುರಿತು ಮಾತನಾಡಿದರು.

ಬೈಂದೂರು ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ತಾ.ಪಂ ಸದಸ್ಯರಾದ ಉದಯ್ ಜಿ ಪೂಜಾರಿ, ಬೈಂದೂರು ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ವಿಘ್ನೇಶ್ವರ ಮಂಜ ಮಾರಣಕಟ್ಟೆ, ಶ್ರೀ ನಾಗರಾಜ ಮಂಜ ಮಾರಣಕಟ್ಟೆ, ಸ್ಥಳೀಯ ವೈದ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಪಂಚಾಯಿತ್ ಸದಸ್ಯರಾದ ಪ್ರದೀಪ್ ಶೆಟ್ಟಿ ಮಕ್ಕಿಮನೆ, ಉದ್ಯಮಿಗಳಾದ ಶಂಕರ್ ಭಟ್ ಮಾರಣಕಟ್ಟೆ, ರಾಮಚಂದ್ರ ಮಂಜ, ಮಾರಣಕಟ್ಟೆ, ಚಿತ್ತೂರು ಪ್ರಾಥಮಿಕ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದಿವಾಕರ್ ಆಚಾರ್ಯ, ಜಿಲ್ಲಾ ಹಾಗೂ ವಲಯ ಮಟ್ಟದ ದೈ.ಶಿ.ಶಿ. ಸಂಘದ ಅಧ್ಯಕರು ಮತ್ತು ಉಪಾಧ್ಯಕ್ಷಗಳು, ಬೈಂದೂರು ವಲಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ದೈ.ಶಿ. ಶಿಕ್ಷಕರುಗಳು ಭಾಗವಹಿಸಿದ್ದರು.

ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಗದೀಶ ಶೆಟ್ಟಿ ಸ್ವಾಗತಿಸಿದರು, ದೈ.ಶಿ.ಶಿಕ್ಷಕ ಸದಾಶಿವ ಕುಂಬಾರ ವಂದಿಸಿದರು, ಕನ್ನಡ ಭಾಷಾ ಶಿಕ್ಷಕ ದಯಾನಂದ.ಕೆ. ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)